ಮಧ್ಯರಾತ್ರಿ ಸಮಯ ಊರೆಲ್ಲ ಮಲಗಿರುವಾಗಲೆ ರಾಜಾರೋಷವಾಗಿ ಗೂಡ್ಸ್ ವಾಹನದಲ್ಲಿ ಬಂದಿರುವ ಖದೀಮರು ಕ್ಷಣ ಮಾತ್ರದಲ್ಲೆ ಶೆಡ್ ನ ಬೀಗ ಹೊಡೆದು ಲಕ್ಷ ಲಕ್ಷ ಬೆಲೆ ಬಾಳುವ ಹಂದಿ ಮತ್ತು ಕುರಿಗಳನ್ನ ಖದ್ದು ಎಸ್ಕೇಪ್ ಆಗಿದ್ರು. ಅಲ್ಲದೆ ಎಸ್ಕೇಪ್ ಆಗುವ ವೇಳೆ ಗೇಟ್ ನ ಮುಂಬಾದ ಸಿಸಿ ಕ್ಯಾಮರಾ ಮುಂದೆಯೆ ಚಡ್ಡಿ ಅಲ್ಲಾಡಿಸಿ ಚಕಮ್ ನೀಡಿದ್ದು ಇದೀಗ ಈ ರೀತಿ ಕಳ್ಳತನ ಮಾಡಿದ್ದ ಅಂಬರೀಶ್, ಶೇಖಪ್ಪ, ಮತ್ತು ಯಲ್ಲಪ್ಪ ಅನ್ನೂ ಮೂವರು ಆರೋಫಿಗಳ ಎಡೆಮುರಿಕಟ್ಟಿದ್ದಾರೆ.ಎಸ್ಕೇಪ್ ಆಗಿದ್ದ ಅಂಬರೀಶ್, ಶೇಖಪ್ಪ, ಮತ್ತು ಯಲ್ಲಪ್ಪ ಅನ್ನೂ ಮೂವರು ಆರೋಫಿಗಳನ್ನ ಬಂದಿಸಿ ಜೈಲಿಗಟ್ಟಿದ್ದಾರೆ.ಬಂದಿತ ಮೂವರು ಆರೋಪಿಗಳು ಉತ್ತರ ಕರ್ನಾಟಕ ಮೂಲದವರಾಗಿದ್ದು ಸಂತೆಯ ಸೋಗಿನಲ್ಲಿ ಬೆಂಗಳೂರು ಅಕ್ಕ ಪಕ್ಕದ ಜಿಲ್ಲೆಗಳ ರೈತರ ಶೆಡ್ಗಳಿಗೆ ಬಂದು ರಾತ್ರೋ ರಾತ್ರಿ ಕನ್ನ ಹಾಕಿರುವುದು ಬೆಳಕಿಗೆ ಬಂದಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

