Breaking News

ಇಂಡಿಗೋ ಏರ್ ಲೈನ್ಸ್’ ನ ಮೂವರು ಅಧಿಕಾರಿಗಳ ವಿರುದ್ಧ ‘FIR’ ದಾಖಲು.!

ಪೈಲಟ್ ಒಬ್ಬರು ಇಂಡಿಗೋ ಏರ್ಲೈನ್ಸ್ನ ಮೂವರು ಹಿರಿಯ ಅಧಿಕಾರಿಗಳ ಮೇಲೆ ಗುರುಗ್ರಾಮ್ನಲ್ಲಿರುವ ಏರ್ಲೈನ್ಸ್ನ ಕಾರ್ಪೊರೇಟ್ ಕಚೇರಿಯಲ್ಲಿ ಜಾತಿ ಆಧಾರಿತ ಕಿರುಕುಳ, ಅವಮಾನ ಮತ್ತು ವೃತ್ತಿಪರ ಬಲಿಪಶು ಕೃತ್ಯ ಎಸಗಿದ್ದಾರೆ ಎಂದು ಆರೋಪಿಸಿ ಪೊಲೀಸ್ ದೂರು ದಾಖಲಿಸಿದ್ದಾರೆ.ನೀವು ವಿಮಾನ ಹಾರಿಸಲು ಯೋಗ್ಯರಲ್ಲ, ವಾಪಸ್ ಹೋಗಿ ಚಪ್ಪಲಿ ಹೊಲಿಯಿರಿ” ಮತ್ತು “ನೀವು ಇಲ್ಲಿ ವಾಚ್ ಮ್ಯಾನ್ ಆಗಲು ಸಹ ಯೋಗ್ಯರಲ್ಲ” ಎಂದು ನಿಂದಿಸಿದ್ದಾರೆ. ಅಲ್ಲದೇ ಪರಿಶಿಷ್ಟ ಜಾತಿಯ ವ್ಯಕ್ತಿಯಾಗಿದ್ದರಿಂದ ಅವಮಾನಿಸಲು ಮತ್ತು ಕೀಳಾಗಿ ನಿಂದಿಸಲಾಗಿದೆ ಎಂದು ಅವರು ಹೇಳಿದರು. ದೂರಿನಲ್ಲಿ, ಉದ್ದೇಶಪೂರ್ವಕವಾಗಿ ಕಿರುಕುಳ ನೀಡಲಾಗಿದೆ. ಕೆಲಸಕ್ಕೆ ರಾಜೀನಾಮೆ ನೀಡುವಂತೆ ಒತ್ತಡ ಹೇರುವ ಗುರಿಯನ್ನು ಹೊಂದಿದೆ ಎಂದು ಹೇಳಲಾಗಿದೆ.ಆರೋಪಿಗಳಾದ ತಪಸ್ ಡೇ, ಮನೀಶ್ ಸಹಾನಿ ಮತ್ತು ಕ್ಯಾಪ್ಟನ್ ರಾಹುಲ್ ಪಾಟೀಲ್ ವಿರುದ್ಧ SC/ST (ದೌರ್ಜನ್ಯ ತಡೆ) ಕಾಯ್ದೆ ಮತ್ತು ಭಾರತೀಯ ನ್ಯಾಯ ಸಂಹಿತಾ (BNS) ವಿಭಾಗಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.

Share News

About BigTv News

Check Also

TCS ನಾಸಿಕ್ ಪ್ರಕರಣ: ಆರೋಪಿ ನಿದಾ ಖಾನ್ ಪತಿ ಬಂಧನ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಶಾಖೆಯ ಸುತ್ತಲಿನ ವಿವಾದ ನಾಟಕೀಯ ತಿರುವು ಪಡೆದುಕೊಂಡಿದ್ದು, ಕಂಪನಿಗೆ ಸಂಬಂಧಿಸಿದ ಒಂಬತ್ತು …

Leave a Reply

Your email address will not be published. Required fields are marked *