ರಾಜ್ಯ ಪೊಲೀಸರ ಟೋಪಿಗಳ ಮಾದರಿ ಬದಲಾವಣೆಯ ಪ್ರಸ್ತಾವನೆ ಮತ್ತೊಮೆ ಚರ್ಚೆಗೆ ಬಂದಿದೆ.ಪ್ರಸ್ತುತ ಪೊಲೀಸ್ ಕಾನ್‌ಸ್ಟೇಬಲ್ ಹಾಗೂ ಹೆಡ್ ಕಾನ್‌ಸ್ಟೇಬಲ್‌ಗಳು ಧರಿಸುತ್ತಿರುವ ಖಾಕಿ ಬಣ್ಣದ ಸ್ಲೌಚ್ ಕ್ಯಾಪ್‌ಗಳ ಬದಲಾಗಿ ಕಡುನೀಲಿ ಬಣ್ಣದ ಬೆರೆಟ್ ಕ್ಯಾಪ್‌ಗಳಿಗೆ ಧರಿಸಲು ಪ್ರಸ್ತಾವನೆ ಸಲ್ಲಿಸಿದ್ದು, ಗೃಹಸಚಿವ ಡಾ.ಜಿ.ಪರಮೇಶ್ವರ್ ವಿವಿಧ ರಾಜ್ಯಗಳ ಪೊಲೀಸ್ ಕ್ಯಾಪ್‌ಗಳನ್ನು ಪರಿಶೀಲನೆ ನಡೆಸಿದ್ದಾರೆ.ಈ ಹಿನ್ನೆಲೆಯಲ್ಲಿ ಗೃಹಸಚಿವ ಡಾ.ಜಿ.ಪರಮೇಶ್ವರ್ ಇಂದು ಹಿರಿಯ ಪೊಲೀಸ್ ಅಧಿಕಾರಿಗಳ ಸಮಾವೇಶದಲ್ಲಿ ಟೋಪಿಗಳ ಬದಲಾವಣೆಯ ಬಗ್ಗೆ ಪರಿಶೀಲನೆ ನಡೆಸಿದ್ದಾರೆ.
ವಿವಿಧ ರಾಜ್ಯಗಳ ಟೋಪಿಗಳನ್ನು ವೀಕ್ಷಿಸಿದ ಗೃಹಸಚಿವರಿಗೆ ಎಡಿಜಿಪಿ ಉಮೇಶ್‌ಕುಮಾರ್ ನೂತನ ಪ್ರಸ್ತಾವಿತ ಟೋಪಿಗಳ ಅನುಕೂಲತೆ ಹಾಗೂ ಪ್ರಸ್ತುತ ಬಳಕೆಯಲ್ಲಿರುವ ಟೋಪಿಗಳ ಅನಾನುಕೂಲತೆ ಬಗ್ಗೆ ವಿವರಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

