Breaking News

ರಂಜಾನ್ ಹಬ್ಬಕ್ಕೂ ಮೂರುಸಾವಿರ ಮಠಕ್ಕೂ ಅವಿನಾಭಾವ ಸಂಬಂಧ

ವಾಣಿಜ್ಯ ನಗರೀ ಹುಬ್ಬಳ್ಳಿಯಲ್ಲಿ ರಂಜಾನ್ ಹಬ್ಬಕ್ಕೂ ಮೂರುಸಾವಿರ ಮಠಕ್ಕೂ ಅವಿನಾಭಾವ ಸಂಬಂಧವಿದೆ. ಇಂದು ರಂಜಾನ್ ಹಬ್ಬದ ಪ್ರಾರ್ಥನೆ ನಂತರ ಮುಸ್ಲಿಂ ಬಾಂಧವರು ಮೂರು ಸಾವಿರ‌ ಮಠಕ್ಕೆ ಭೇಟಿ ನೀಡಿ ಮೂರು ಸಾವಿರ ಮಠದ ಶ್ರೀ ಗುರುಸಿದ್ದರಾಜಯೋಗೀಂದ್ರ ಶ್ರೀಗಳಿಂದ ಆಶೀರ್ವಾದ ಪಡೆಯುತ್ತಿದ್ದರು. ಕಳೆದ ಹಲವು ದಶಕಗಳಿಂದಲೂ ಈ ಸಂಪ್ರದಾಯ ಬೆಳೆದುಕೊಂಡು ಬಂದಿದೆ. ಈ ವರ್ಷವೂ ಕೂಡ ಶ್ರೀ ರಾಜಯೋಗೀಂದ್ರ ಶ್ರೀಗಳು ಮುಸ್ಲಿಂ ಬಾಂಧವರಿಗೆ ಶುಭಕೋರಿದರು. ಎಂದೆಂದಿಗೂ ಹಿಂದು ‌ಮುಸ್ಲಿಂರಲ್ಲಿ ಸಾಮರಸ್ಯ ನೆಲೆಸಲಿ. ಎಲ್ಲರೂ ಸಹೋದರಂತೆ ಬಾಳಿ ಎಂದು ಆಶಿರ್ವದಿಸಿದರು. ಮುಸ್ಲಿಂ ಸಮುದಾಯದ ಮೌಲ್ವಿಗಳು, ಮುಸ್ಲಿಂ ಮುಖಂಡ ಎ ಎಂ ಹಿಂಡಸಗೇರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Share News

About admin

Check Also

Featured Video Play Icon

ತಮ್ಮ ಠಾಣೆಯಲ್ಲಿ ಕೇಸ್ ಇದ್ದರು ರೌಡಿ ಶೀಟರ್ ಗೆ ಹಣ್ಣು ಹಂಪಲದ ಗೌರವ ಕೊಟ್ಟ ಇನ್ಸ್ಪೆಕ್ಟರ್!!!

ಅವಳಿ ನಗರದ ಪೋಟೊ ಕಹಾನಿ….. ಕಮೀಷನರ್ ಸಾಹೇಬ್ರು ತಿಳಿಯಲೇ ಬೇಕಾದ ಈ ಸಣ್ಣ ಸುದ್ದಿಯ ನೈಜ ಸತ್ಯ... ಸಾಮನ್ಯ ಜನರು …

Leave a Reply

Your email address will not be published. Required fields are marked *