ವಿದೇಶಿ ಹಣ ಪರಿವರ್ತನೆ ನೆಪದಲ್ಲಿ ಉದ್ಯಮಿಯೊಬ್ಬರಿಂದ ಎರಡು ಕೋಟಿ ರು. ಹಣ ದೋಚಿ ಕಿಡಿಗೇಡಿಗಳು ಪರಾರಿಯಾಗಿರುವ ಘಟನೆ ವಿದ್ಯಾರಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಹಣ ಪರಿವರ್ತನೆ ಸಲುವಾಗಿ ಬೆಂಜಮಿನ್ ಅವರ ಭೇಟಿಗೆ ಪೂರ್ವನಿಗದಿಯಂತೆ ವಿದ್ಯಾರಣ್ಯಪುರದ ಎಂ.ಎಸ್.ಪಾಳ್ಯ ಸರ್ಕಲ್ ಬಳಿಗೆ ತೆರಳಿದ್ದೆ. ತದನಂತರ ಬೆಂಜಮಿನ್ ಅವರಿಗೆ ನಾವು ನೀಡಿದ ಹಣವನ್ನು ಎಣಿಕೆ ಮಾಡುತ್ತಿದ್ದರು. ಈ ವೇಳೆ ಏಕಾಏಕಿ ಏಳೆಂಟು ಜನರು ನುಗ್ಗಿ ಹಣವನ್ನು ಕೊಡುವಂತೆ ಬೆದರಿಸಿದರು. ಇದಕ್ಕೆ ವಿರೋಧಿಸಿದಾಗ ಚಾಕು ತೋರಿಸಿ ಜೀವ ಬೆದರಿಕೆ ಹಾಕಿ ಹಣ ದೋಚಿ ಪರಾರಿಯಾದರು. ಅದೇ ವೇಳೆ ನಮ್ಮ ಜತೆ ಇದ್ದ ಬೆಂಜಮಿನ್ ಹಾಗೂ ಆತನ ಸ್ನೇಹಿತರು ಸಹ ಓಡಿ ಹೋದರು ಎಂದು ದೂರಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

