Breaking News

ಎಸ್​ಸಿ, ಇಸಿಗಳನ್ನ ವ್ಯವಸ್ಥಿತವಾಗಿ​ ವಶಕ್ಕೆ ಪಡೆಯಲು ಆರ್​ಎಸ್​ಎಸ್ ಷಡ್ಯಂತ್ರ : ರಾಹುಲ್ ಗಾಂಧಿ.

ನವದೆಹಲಿ:ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಆರ್​ಎಸ್​ಎಸ್ ವಿರುದ್ಧ ತಮ್ಮ ವಾಗ್ದಾಳಿಯನ್ನು ಮುಂದುವರಿಸಿದ್ದಾರೆ. ದೇಶದ ಸಾಂವಿಧಾನಿಕ ಸಂಸ್ಥೆಗಳಾದ ಸುಪ್ರೀಂ ಕೋರ್ಟ್​ ಹಾಗೂ ಚುನಾವಣಾ ಆಯೋಗವನ್ನ ಆರ್​ಎಸ್​ಎಸ್​ ವ್ಯವಸ್ಥಿತವಾಗಿ ತನ್ನ ವಶಕ್ಕೆ ತೆಗೆದುಕೊಳ್ಳಲು ಹುನ್ನಾರ ನಡೆಸುತ್ತಿದೆ ಅಂತ ಎಐಸಿಸಿ ಅಧ್ಯಕ್ಷ ರಾಹುಲ್​ ಗಾಂಧಿ ಆರೋಪಿಸಿದ್ದಾರೆ. ಅಲ್ಲದೇ ಭಾರತ ಒಂದು ಏಕಮುಖಿ ಚಿಂತನೆಯಿಂದ ಮುಂದುವರೆಯಲು ಸಾಧ್ಯವಿಲ್ಲ ಅಂತ ಕೂಡ ಅಭಿಪ್ರಾಯ ಪಟ್ಟಿದ್ದಾರೆ. ಸಿರಿಕೋಟೆಯ ಶಿಕ್ಷಣ ತಜ್ಞರೊಂದಿಗಿನ ಏರ್ಪಡಿಸಲಾಗಿದ್ದ ಸಂವಾದದಲ್ಲಿ ಮಾತನಾಡಿದ ರಾಹುಲ್​. ಇತ್ತೀಚೆಗೆ ಭಾಷಣವೊಂದರಲ್ಲಿ ಆರ್​ಎಸ್​ಎಸ್​ ಮುಖ್ಯಸ್ಥ ಮೋಹನ್ ಭಾಗವತ್​, ನಾವು ದೇಶವನ್ನು ಸಂಘಟಿಸುತ್ತೇವೆ ಅಂತ ಹೇಳಿದ್ರು. ದೇಶ ಸಂಘಟಿಸಲು ಇವಱರು..? ದೇಶ ತನ್ನಷ್ಟಕ್ಕೆ ತಾನೇ ಸಂಘಟಿತಗೊಳ್ಳುತ್ತದೇ. ಇವರ ಭ್ರಮಾಲೋಕ ಇನ್ನು ಕೆಲವೇ ದಿನಗಳಲ್ಲಿ ಕಳಚಿ ಬೀಳಲಿದೆ ಅಂತ ರಾಹುಲ್ ಹರಿಹಾಯ್ದಿದ್ದಾರೆ. ಆರ್​​ಎಸ್​ಎಸ್ ತನ್ನ ಸಿದ್ಧಾಂತಗಳನ್ನ ನಮ್ಮ ಹೇರುತ್ತಿದೆ ಅನ್ನೋ ಭಾವನೆ ಸದ್ಯ ದೇಶದ ಜನರಲ್ಲೆರಲ್ಲೂ ಮನೆಮಾಡಿದೆ ಅಂತ ರಾಹುಲ್ ಹೇಳಿದ್ದಾರೆ.
Share News

About Shaikh BIG TV NEWS, Hubballi

Check Also

ಮ್ಯಾನ್ಮರ್ ಭೂಕಂಪನದಲ್ಲಿ 1700ಕ್ಕೂ ಹೆಚ್ಚು ಮಂದಿ ದುರ್ಮರಣ.!

ಸ್ಪ್ರಿಂಗ್ ರೆವಲ್ಯೂಷನ್ ಮ್ಯಾನ್ಮರ್ ಮುಸ್ಲಿಮ್ ನೆಟ್ ವರ್ಕ್ ಸಮಿತಿಯ ಸದಸ್ಯ ಕುನ್ ಕೀ ಶುಕ್ರವಾರ ಸಂಭವಿಸಿದ ಭೂಕಂಪನದಿಂದ 60 ಮಸೀದಿಗಳು …

Leave a Reply

Your email address will not be published. Required fields are marked *