ಬೆಳಗಾವಿಯಲ್ಲಿ ಗ್ರಾಮ ಪಂಚಾಯತಿ ಸದಸ್ಯನೊಬ್ಬ ಗೂಂಡಾ ವರ್ತನೆ ತೋರಿಸಿದ್ದು, ಬಂದೂಕಿನಿಂದ ಗುಂಡು ಹಾರಿಸಿ ಬರ್ತಡೆ ಆಚರಣೆ ಮಾಡಿಕೊಂಡಿದ್ದಾನೆ. ಸಾರ್ವಜನಿಕವಾಗಿ ಗಾಳಿಯಲ್ಲಿ ಗುಂಡು ಹಾರಿಸಿದ ಗ್ರಾಮ ಪಂಚಾಯಿತಿ ಸದಸ್ಯನನ್ನು ಅರೆಸ್ಟ್ ಮಾಡಲಾಗಿದೆ. ರಸ್ತೆಯಲ್ಲಿಯೇ ಗುಂಡು ಹಾರಿಸಿದ್ದು ಆತನ ಸುತ್ತಮುತ್ತ ಇರುವ ಯುವಕರು ಕೈಯಲ್ಲಿ ಚಾಕು ಹಿಡಿದಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಇದೀಗ ವೈರಲ್ ಆಗುತ್ತಿದೆ. ವಿಡಿಯೋ ಬಳಿಕ ಬಾಬಾ ಜಾನ್ ನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಕುಡ್ಸಿ ಪೊಲೀಸ್ ಠಾಣೆಯಲ್ಲಿ ಆತನ ವಿರುದ್ಧ FIR ಸಹ ದಾಖಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

