Breaking News

ಕೇವಲ 14 ಕಿ.ಮೀ.ಗೆ ಬರೋಬ್ಬರಿ 4000 ರೂ. ಬಾಡಿಗೆ! ಬೆಂಗಳೂರು ಏರ್‌ಪೋರ್ಟ್‌ನಲ್ಲಿ ಮಹಿಳೆಗೆ ಕ್ಯಾಬ್ ಡ್ರೈವರ್‌ ವಂಚನೆ

ಬೆಂಗಳೂರು, ಆಗಸ್ಟ್ 30: ಯುನೈಟೆಡ್ ಕಿಂಗ್‌ಡಮ್‌ನಿಂದ ಮೂರು ವರ್ಷಗಳ ಬಳಿಕ ಭಾರತಕ್ಕೆ ಮರಳಿದ ಮಹಿಳೆಯೊಬ್ಬರಿಗೆ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಟ್ಯಾಕ್ಸಿ ಚಾಲಕ ವಂಚನೆ ಮಾಡಿದ್ದಾನೆ. ಕೇವಲ 14 ಕಿ.ಮೀ. ಪ್ರಯಾಣಕ್ಕೆ ಬರೋಬ್ಬರಿ ₹4,000 ಬಾಡಿಗೆ ಪಡೆದು, ನಕಲಿ ರಶೀದಿ ನೀಡಿದ್ದಾನೆ. ಕಂಟೆಂಟ್ ಕ್ರಿಯೇಟರ್ ಅಬೀಷ್ನಾ. ಎನ್ ಅವರು ಈ ಕಹಿ ಅನುಭವವನ್ನು ಲಿಂಕ್ಡ್‌ಇನ್‌ನಲ್ಲಿ ಹಂಚಿಕೊಂಡಿದ್ದಾರೆ. ಟ್ಯಾಕ್ಸಿ ಹತ್ತುವ ಮುನ್ನ ದರ ಕೇಳಿದಾಗ ಚಾಲಕ ಮೀಟರ್ ಚಾರ್ಜ್ ಎಂದು ನಂಬಿಸಿದ್ದ. ಹೊಸ ನಗರವಾಗಿದ್ದರಿಂದ ದರದ ಬಗ್ಗೆ ತಿಳಿದಿರದ ಮಹಿಳೆ, ಬಳಿಕ ತಾನು ವಂಚನೆಗೊಳಗಾಗಿರುವುದು ಅರಿಯದೆ ಹಣ ಪಾವತಿಸಿದ್ದಾರೆ. ಪೋಸ್ಟ್ ವೈರಲ್ ಆಗುತ್ತಿದ್ದಂತೆ ಹಲವರು ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಬೆಂಗಳೂರು ಏರ್‌ಪೋರ್ಟ್ ಟ್ಯಾಕ್ಸಿಗಳಲ್ಲಿ ಹೆಚ್ಚಿನ ದರ ವಸೂಲಿ ಹಾಗೂ ನಕಲಿ ಬಿಲ್ ನೀಡುವ ಬಗ್ಗೆ ಹಲವು ವರ್ಷಗಳಿಂದ ದೂರುಗಳಿವೆ ಎಂದು ಅಬೀಷ್ನಾ ಅವರ ಕಂಪನಿ ಸಂಸ್ಥಾಪಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Share News

About BigTv News

Check Also

ಶಾಸಕ ಉಮೇಶ್ ಮೇಟಿ ಸೊಸೆ ವಿರುದ್ಧ ಅಕ್ರಮ ಆರೋಪ; ಎಂಡಿ ಓದುವಾಗ ಸರ್ಕಾರಿ ವೈದ್ಯೆಯಾಗಿ ವೇತನ ಪಡೆದರಾ ಅಂಕಿತಾ!

ಬಾಗಲಕೋಟೆ: ಖಾಸಗಿ ಕಾಲೇಜಿನಲ್ಲಿ MD ವ್ಯಾಸಂಗ ಮಾಡುತ್ತಲೇ ‘ನಮ್ಮ ಕ್ಲಿನಿಕ್’ನಲ್ಲಿ ವೈದ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸದೆ ₹75 ಸಾವಿರ ಸರ್ಕಾರಿ ವೇತನ …

Leave a Reply

Your email address will not be published. Required fields are marked *