Breaking News

ಮಾದಕ ವಸ್ತು ಕಳ್ಳಸಾಗಾಣಿಕೆ ಮಾಡುತ್ತಿದ್ದ ಶಿಕ್ಷಕಿ ಬಂಧನ!

ದಂಧೆಯ ಕಿಂಗ್​ಪಿನ್ ಸೀಮಾ ಸಿನ್ಹಾ ಟ್ಯೂಷನ್​ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಳು. ಈ ಬಿಹಾರದ ರಾಜಧಾನಿ ಪಟನಾದ ನಿವಾಸಿ. ಈ ದಂಧೆಯಿಂದಲೇ ಕಳೆದ ಎರಡು ವರ್ಷಗಳಲ್ಲಿ ಆಕೆ 20 ಕೋಟಿ ರೂಪಾಯಿಗಳ ವಹಿವಾಟು ನಡೆಸಿದ್ದಾಳೆ. ಇದನ್ನು ಕೇಳಿ ಪೊಲೀಸರೇ ಒಂದು ಕ್ಷಣ ದಂಗಾಗಿದ್ದಾರೆ. ಅಷ್ಟರ ಮಟ್ಟಿಗೆ ಡ್ರಗ್ಸ್​ ಜಾಲದಲ್ಲಿ ಆಕೆಯ ಪ್ರಭಾವ ಇತ್ತು. ಚಾವಕ್ಕಾಡ್ ನಿವಾಸಿಗಳಾದ ಫಜಲ್ ಮತ್ತು ನೆಜಿಲ್ ಅವರನ್ನು ತ್ರಿಶೂರ್ ರೈಲ್ವೆ ನಿಲ್ದಾಣದಲ್ಲಿ MDMA ಯೊಂದಿಗೆ ಪೊಲೀಸರು ಬಂಧಿಸಿದ್ದರು. ಆರೋಪಿಗಳ ವಿಚಾರಣೆ ವೇಳೆ ಸೀಮಾ ಸಿನ್ಹಾಳ ಹೆಸರನ್ನು ಬಾಯ್ಬಿಟ್ಟಿದ್ದರು. ನಮಗೆ MDMA ಕೊಟ್ಟಿದ್ದು ಸೀಮಾ ಸಿನ್ಹಾ ಎಂದು ಆರೋಪಿಗಳು ಪೊಲೀಸರ ಮುಂದೆ ಹೇಳಿದ್ದರು.

Share News

About BigTv News

Check Also

ಅಡುಗೆ ಮಾಡುವುದನ್ನ ಕಲಿಬೇಕಮ್ಮ: ಅತ್ತೆ ಬುದ್ಧಿ ಹೇಳಿದ್ದಕ್ಕೆ 18 ವರ್ಷದ ಯುವತಿ ಆತ್ಮಹತ್ಯೆ!

ಚಿಕ್ಕಬಳ್ಳಾಪುರ: ಇತ್ತೀಚಿನ ದಿನಗಳಲ್ಲಿ ಯುವಕ- ಯುವತಿಯರಿಗೆ ಬುದ್ಧಿವಾದ ಹೇಳುವಂತಿಲ್ಲ. ವಾರದ ಹಿಂದೆಯಷ್ಟೇ ಮೊಬೈಲ್​ ನೋಡಬೇಡ ಎಂದು ಹೇಳಿದಕ್ಕೆ ಕೋಪಗೊಂಡು ಯುವತಿಯೊಬ್ಬಳು …

Leave a Reply

Your email address will not be published. Required fields are marked *