ವ್ಯಕ್ತಿಯೊಬ್ಬ ವಿಮೆ ಹಣಕ್ಕಾಗಿ ಇಡೀ ಕುಟುಂಬ ಸದಸ್ಯರನ್ನೇ ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ತನ್ನ ತಂದೆ-ತಾಯಿ ಹಾಗೂ ಪತ್ನಿಯನ್ನು ಕೊಂದು ರಸ್ತೆ ಅಪಘಾತ ಎಂದು ಸುಳ್ಳು ಹೇಳಿ ಬಹು ವಿಮಾ ಕಂಪನಿಗಳಿಂದ ಕೋಟ್ಯಂತರ ರೂಪಾಯಿಗಳನ್ನು ಪಡೆದಿರುವ ಆತಂಕಕಾರಿ ಪ್ರಕರಣ ಬೆಳಕಿಗೆ ಬಂದಿದೆ.ವಿಮಾ ಕಂಪನಿಗಳಿಂದ 39 ಕೋಟಿ ರೂ. ಹಣ ಪಡೆಯಲು ಮನೆಯ ಎಲ್ಲರನ್ನೂ ಹತ್ಯೆ ಮಾಡಿದ್ದಾನೆ.
ವಿಮಾ ಕಂಪನಿ ಏಜೆಂಟ್ ನೀಡಿದ ದೂರಿನ ಆಧಾರದ ಮೇಲೆ, ಪೊಲೀಸರು ಆರೋಪಿ ಮಗ ವಿಶಾಲ್ ಸಿಂಘಾಲ್ ಮತ್ತು ಅವನ ಸ್ನೇಹಿತ ಸತೀಶ್ ಅವರನ್ನು ವಶಕ್ಕೆ ಪಡೆದು ವಿಚಾರಣೆ ಆರಂಭಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

