ಡೊಳ್ಳಿಪುರದಲ್ಲಿ ನಡೆದ ಒಂದು ದಾರುಣ ಘಟನೆಯಲ್ಲಿ, ಅನುಮಾನದ ಭೂತಕ್ಕೆ ಬಲಿಯಾದ ಗಂಡನೊಬ್ಬ ತನ್ನ ಎರಡೂವರೆ ತಿಂಗಳ ಗರ್ಭಿಣಿ ಪತ್ನಿಯನ್ನು ಕೊಲೆಗೈದಿರುವ ಘಟನೆ ಬೆಳಕಿಗೆ ಬಂದಿದೆ. ಆರೋಪಿಯಾದ ಮಹೇಶ್ ತನ್ನ ಪತ್ನಿ ಶುಭಾಳನ್ನು ಕಬ್ಬಿಣದ ಹಾರೆಯಿಂದ ಹೊಡೆದು ಕೊಂದು, ತಾನೇ ಕಥೆಕಟ್ಟಿ ಇತರರ ಮೇಲೆ ಆರೋಪ ಹೊರಿಸಲು ಯತ್ನಿಸಿದ್ದಾನೆ.ಘಟನೆಯ ಬಗ್ಗೆ ತಿಳಿದ ಕೂಡಲೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಬಿ.ಟಿ. ಕವಿತಾ ನೇತೃತ್ವದಲ್ಲಿ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮಹಜರು ನಡೆಸಿದರು. ಈ ವೇಳೆ, ಮಹೇಶ್ ಏನೂ ತಿಳಿಯದವನಂತೆ ನಡೆದುಕೊಂಡಿದ್ದ. ಆದರೆ, ಡಾಗ್ ಸ್ಕ್ವಾಡ್‌ನ ಶ್ವಾನವು ಮಹೇಶನೇ ಕೊಲೆಗಾರ ಎಂದು ಸುಳಿವು ನೀಡಿತು. ಜೊತೆಗೆ, ಮಹೇಶನ ಷರ್ಟ್‌ನಲ್ಲಿ ರಕ್ತದ ಕಲೆಗಳು ಕಂಡುಬಂದಿದ್ದವು. ಇದರ ಆಧಾರದ ಮೇಲೆ ಪೊಲೀಸರು ಮಹೇಶನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದಾಗ, ಆತ ತನ್ನ ಸಂಶಯದಿಂದಾಗಿ ಪತ್ನಿಯನ್ನು ಕೊಂದಿರುವುದನ್ನು ಒಪ್ಪಿಕೊಂಡಿದ್ದಾನೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

