ಶಾಲೆಗೆ ಬಿಡುವ ನೆಪದಲ್ಲಿ ತಮ್ಮ ಮನೆಯ ಮನೆಗೆಲಸದಾಕೆ ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಕಿನ್ನಿಗೋಳಿಯ ಪಿಂಟೋ ಗಾರ್ಡನ್ ಮಾಲೀಕ, ಉದ್ಯಮಿ ರಾಕೀ ಪಿಂಟೋ (68) ಅವರನ್ನು ಪೊಲೀಸರು ಶನಿವಾರ ಬಂಧಿಸಿದ್ದಾರೆ. ಮನೆಗೆಲಸಕ್ಕೆ ಬರುವ ತಾಯಿಯೊಂದಿಗೆ ಇರುತ್ತಿದ್ದ ಬಾಲಕಿಯನ್ನು ಶಾಲೆಗೆ ಬಿಡುವ ನೆಪದಲ್ಲಿ ಕಾರಿನಲ್ಲಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಬಾಲಕಿಯ ತಾಯಿ ನೀಡಿದ ದೂರಿನ ಮೇರೆಗೆ ಮೂಲ್ಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

