Breaking News

ಬೆಳಗಾವಿ: ₹5 ಸಾವಿರಕ್ಕಾಗಿ ಜಾನಪದ ಗಾಯಕನ ಕೊಲೆ!

ಈರಪ್ಪ ವಸಂತ ಅಕ್ಕಿವಾಟೆ ಬಳಿ ಗಾಯಕ ಮಾರುತಿ ಲಠ್ಠೆ, ಕಬ್ಬು ಕಟಾವು ಮಾಡುವವರ ಗುಂಪಿನಲ್ಲಿ ಕೆಲಸ ಮಾಡುತ್ತಿದ್ದರು.ಅದಕ್ಕಾಗಿ ₹50 ಸಾವಿರ ಮುಂಗಡ ಹಣ ಪಡೆದಿದ್ದರು. ಅದರಲ್ಲಿ ₹45 ಸಾವಿರ ಮರು ಪಾವತಿಸಿದ್ದರು. ಇನ್ನೂ ಐದು ಸಾವಿರ ಕೊಡಬೇಕಾಗಿತ್ತು.ತನ್ನ ಜಾನಪದ ಹಾಡುಗಳಿಗೆ ಬೇಡಿಕೆ ಬಂದ ಹಿನ್ನೆಲೆಯಲ್ಲಿ ಕಬ್ಬು ಕಟಾವು ಮತ್ತು ಕಾರ್ಖಾನೆಗೆ ಸಾಗಣೆ ಮಾಡುವ ಗುಂಪಿನಲ್ಲಿ ಕೆಲಸ ಬಿಟ್ಟು ಸಂಗೀತದ ಕಡೆಗೆ ಹೆಚ್ಚಿನ ಗಮನಹರಿಸಿದ್ದರು. ಬಾಕಿ ಹಣ ವಾಪಸ್ ನೀಡದಕ್ಕೂ ಆಕ್ರೋಶಗೊಂಡಿದ್ದ ಈರಪ್ಪ, ತನ್ನ ಸಹಚರರೊಂದಿಗೆ ಸೇರಿ ಮಾರುತಿಯನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಲ್ಲದೇ, ಆತನ ಮೇಲೆ ಕಾರು ಹಾಯಿಸಿದ್ದಾರೆ.ಮಾರುತಿಗೆ ಕಾರು ಹರಿಸಿದ ದುಷ್ಕರ್ಮಿಗಳ ಕಾರು ಕೂಡ ಪಲ್ಟಿಯಾಗಿದ್ದು, ಕೆಲವರು ಗಾಯಗೊಂಡಿದ್ದಾರೆ. ಈ ವೇಳೆ ಆರೋಪಿ ಈರಪ್ಪ ಅಕ್ಕಿವಾಟೆಗೆ ಗೋಕಾಕ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ರಾಯಬಾಗ ಪೊಲೀಸ್ ಠಾಣೆಯಲ್ಲಿ 11 ಜನರ ವಿರುದ್ಧ ಪ್ರಕರಣ ದಾಖಲಾಗಿದೆ.

Share News

About BigTv News

Check Also

ಅತ್ಯಾಚಾರ ಎಸೆಗಿದವರ ಮೇಲೆ‌ ಪ್ರತೀಕಾರ – ಅಪಹರಣ ಮಾಡಿ ಸಿಕ್ಕಿಬಿದ್ದ ಆರೋಪಿಗಳು!

ಬೆಂಗಳೂರು: ಮಾರತ್ತಹಳ್ಳಿಯಲ್ಲಿ ಸ್ನೇಹಿತನ ಪ್ರೇಯಸಿಯನ್ನು ಕಾಲ್‌ಗರ್ಲ್ ಎಂದು ತಪ್ಪಾಗಿ ಭಾವಿಸಿ ಅತ್ಯಾಚಾರ ಎಸಗಿದ ಆರೋಪದ ಹಿನ್ನೆಲೆಯಲ್ಲಿ, ಪ್ರತೀಕಾರಕ್ಕಾಗಿ ಇಬ್ಬರನ್ನು ಅಪಹರಿಸಿ …

Leave a Reply

Your email address will not be published. Required fields are marked *