ತಾಳಿಕೋಟಿ ಗಣೇಶ ನಗರದಲ್ಲಿ ಗುರುವಾರ ತಡರಾತ್ರಿ 6 ಮಂದಿ ಮುಸುಕುದಾರಿ ‘ಚಡ್ಡಿ ಗ್ಯಾಂಗ್’ ಕಳ್ಳರು ಮನೆಯೊಂದರ ಕಳ್ಳತನಕ್ಕೆ ವಿಫಲ ಯತ್ನ ನಡೆಸಿದ್ದಾರೆ.ಮುಖಕ್ಕೆ ಮುಸುಕು ಹಾಕಿಕೊಂಡಿರುವ ಆರು ಜನರ ತಂಡ ಬೀಗ ಹಾಕಿದ್ದ ಮನೆಯ ಕಳ್ಳತನ ಮಾಡಲು ನುಗ್ಗಿದೆ. ನಾಯಿಗಳ ಕೂಗಾಟದಿಂದಾಗಿ ಮನೆಯ ಮಾಳಿಗೆ ಮನೆಯಲ್ಲಿ ಮಲಗಿದ್ದ ಅದೇ ಮನೆಯ ಬಾಡಿಗೆದಾರ ರಾಮನಗೌಡ ಕರಕಳ್ಳಿಯವರು ಎಚ್ಚೆತ್ತು, ಯಾರೆಂದು ವಿಚಾರಿಸುವಾಗಲೇ ತೂರಿಬಂದ ಕಲ್ಲುಗಳಿಂದ ಭಯಗೊಂಡು ಚೀರಾಟ ಪ್ರಾರಂಭಿಸಿದ್ದಾರೆ. ಇದೇ ವೇಳೆಗೆ ಅಲ್ಲಿನ ನಿವಾಸಿಯೊಬ್ಬರು ಪೊಲೀಸ್ ಠಾಣೆಗೂ ಕರೆ ಮಾಡಿದ್ದಾರೆ.ಸುದ್ದಿ ತಿಳಿದು ತಕ್ಷಣವೇ ಸ್ಥಳಕ್ಕೆ ಧಾವಿಸಿದ ಪಿಎಸ್‌ಐ ಜ್ಯೋತಿ ಖೋತ್ ಅವರ ತಂಡ ಬರುವ ಮುಂಚೆಯೇ ಕಳ್ಳರು ಪರಾರಿಯಾಗಿದ್ದಾರೆ .
bigtvnews | Hubli Dharwad News | Kannada News | Karnataka News Hubli News | News In Hubli | Local news

