ಕಾಮಿಡಿ ಕಿಲಾಡಿಗಳು ಖ್ಯಾತಿಯ ಕಲಾವಿದ ಚಂದ್ರಶೇಖರ್ ಸಿದ್ಧಿ ಆತ್ಮಹ*ತ್ಯೆ ಪ್ರಕರಣದಲ್ಲಿ ರೋಚಕ ತಿರುವು ಸಿಕ್ಕಿದೆ. ಇದೀಗ ಚಂದ್ರಶೇಖರ್ ಸಿದ್ಧಿ ಸಾವಿನ ಬಗ್ಗೆ ಮಾತನ ಆಡಿದ ಅವರ ತಾಯಿ ಪುತ್ರನ ಸಾವಿನಲ್ಲಿ ನನಗೆ ಸಂಶಯವಿದೆ ಎಂದು ಆರೋಪ ಮಾಡಿದ್ದಾರೆ.ಸಂಜೆ ವೇಳೆ ಶೌಚಾಲಯಕ್ಕೆ ತೆರಳುವುದಾಗಿ ಹೇಳಿ ತಂಬಿಗೆಯಲ್ಲಿ ನೀರು ತೆಗೆದುಕೊಂಡು ಕಾಡಿನತ್ತ ಬಹಿರ್ದೆಸೆಗೆ ಹೋಗಿದ್ದನು. ಆಗ ತನ್ನ 3 ವರ್ಷದ ಗಂಡು ಮಗು ಜೊತೆಗೆ ‘ನಾನಿನ್ನು ವಾಪಸ್ ಬರಲ್ಲ’ ಎಂದು ಹೇಳಿ ಮನೆ ಹಿಂಬದಿಯ ಗುಡ್ಡದತ್ತ ತೆರಳಿ, ಸಾವಿಗೆ ಶರಣಾಗಿದ್ದಾನೆ ಎಂದು ಹೇಳಲಾಗುತ್ತಿದೆ. ಇದೀಗ ಘಟನೆ ಸಂಬಂಧಿಸಿ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ. ಪ್ರಕರಣ ಸಂಬಂಧಿಸಿ ಯಲ್ಲಾಪುರ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

