ಯೂರಿಯಾ ರಸಗೊಬ್ಬರವನ್ನು ಹೊರ ಜಿಲ್ಲೆಗೆ ಪೂರೈಸಿದ ಸಗಟು ಮಾರಾಟಗಾರರ ಪರವಾನಗಿಯನ್ನು ಜಿಲ್ಲಾಡಳಿತ ರದ್ದುಪಡಿಸಿದೆ. ರೈತರಿಗೆ ನಿಗದಿಗಿಂತ ಹೆಚ್ಚಿನ ಬೆಲೆಗೆ ರಸಗೊಬ್ಬರ ಮಾರಾಟ ಮಾಡಿದ ಚಿಲ್ಲರೆ ಅಂಗಡಿಗಳ ಪರವಾನಗಿಯನ್ನು ಅಮಾನಲ್ಲಿ ಇಟ್ಟಿದೆ.ಹಂಚಿಕೆಯಾದ ರಸಗೊಬ್ಬರವನ್ನು ಸಗಟು ಮಾರಾಟಗಾರರು ಚಿಲ್ಲರೆ ಅಂಗಡಿಗಳಿಗೆ ಪೂರೈಕೆ ಮಾಡಬೇಕು. ಆದರೆ, ಕೆಲ ಸಗಟು ಮಾರಾಟಗಾರರು ಹೊರಜಿಲ್ಲೆಗೆ ರಸಗೊಬ್ಬರ ಸರಬರಾಜು ಮಾಡಿದ್ದಾರೆ. ಹೀಗೆ ಲೋಪ ಎಸಗಿದ ದಾವಣಗೆರೆಯ ಆಶಾಪೂರಿ, ರಾಥೋಡ್, ಮಲ್ಲಿಕಾರ್ಜುನ, ಕಿಶೋರ್ ಫರ್ಟಿಲೈಸರ್ಸ್, ದಿಬ್ಬದಹಳ್ಳಿ ಆಗ್ರೋ ಸರ್ವೀಸ್, ಶ್ರೀನಿವಾಸ ಆಗ್ರೋ ಟ್ರೇಡರ್ಸ್, ಚನ್ನಗಿರಿ ತಾಲ್ಲೂಕಿನ ನಲ್ಲೂರು ವೀರಭದ್ರೇಶ್ವರ ಫರ್ಟಿಲೈಸರ್ಸ್ ಹಾಗೂ ಗೋಪನಹಳ್ಳಿ ವೀರಭದ್ರೇಶ್ವರ ಟ್ರೇಡರ್ಸ್ ಪರವಾನಗಿಯನ್ನು ರದ್ದುಪಡಿಸಲಾಗಿದೆ.ಜಿಲ್ಲೆಯಲ್ಲಿ ಶೀತದ ವಾತಾವರಣ ತಗ್ಗಿದೆ. ರಸಗೊಬ್ಬರ ಹಾಕುವ ಹಂತ ಮೀರಿ ಮೆಕ್ಕೆಜೋಳ ಬೆಳೆಯುತ್ತಿದೆ. ಭತ್ತದ ನಾಟಿ ಚಟುವಟಿಕೆ ಆರಂಭವಾಗಿದ್ದು, ನಾಟಿಗೂ ಮುನ್ನ ಯೂರಿಯಾ ಹಾಕುವುದು ವಾಡಿಕೆ. ಬೇಡಿಕೆಗಿಂತ ಹೆಚ್ಚು ಯೂರಿಯಾ ದಾಸ್ತಾನು ಇದ್ದು, ರೈತರು ಆತಂಕಪಡುವ ಅಗತ್ಯವಿಲ್ಲ. ಶಿವಮೊಗ್ಗ ಜಿಲ್ಲೆಯಿಂದ ಹೆಚ್ಚುವರಿ ರಸಗೊಬ್ಬರ ತರಿಸಿಕೊಳ್ಳಲಾಗುತ್ತಿದೆ’ ಎಂದು ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ತಿಳಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

