ಕಾಗವಾಡ ತಾಲೂಕಿನ ಶೇಡಬಾಳ ಗ್ರಾಮದ ಹೊರವಲಯದ ಕಬ್ಬಿನ ಗದ್ದೆಯಲ್ಲಿ ಹೂವಿನ ವ್ಯಾಪಾರಿ ಶಶಿಕಾಂತ ಎಂಬುವರ ಶವ ಪತ್ತೆಯಾಗಿತ್ತು. ಶಶಿಕಾಂತ ಕಾಗವಾಡ ತಾಲೂಕಿನ ಶೇಡಬಾಳ ಗ್ರಾಮದ ನಿವಾಸಿಯಾಗಿದ್ದರು.ಶಶಿಕಾಂತ ಹೂವಿನ ವ್ಯಾಪಾರದ ಜೊತೆಗೆ ಗ್ರಾಮದಲ್ಲಿ ಬಡ್ಡಿ ವ್ಯವಹಾರವನ್ನು ಕೂಡ ಮಾಡುತ್ತಿದ್ದರು. ಅವಶ್ಯಕತೆ ಇದ್ದವರಿಗೆ ಮತ್ತು ತಮಗೆ ಬೇಕಾದವರಿಗೆ ಮಾತ್ರ ಬಡ್ಡಿ ರೂಪದಲ್ಲಿ ಶಶಿಕಾಂತ ಹಣ ನೀಡುತ್ತಿದ್ದರು.
ತಾನಾಯ್ತು ತನ್ನ ಕೆಲಸ ಆಯ್ತು ಅಂತ ಇದ್ದ ಶಶಿಕಾಂತ ಕಳೆದ ರವಿವಾರ ಕಬ್ಬಿನ ಗದ್ದೆಯಲ್ಲಿ ಶವವಾಗಿ ಪತ್ತೆಯಾಗಿದ್ದರು.ಪೊಲೀಸರು ಫೈಮುದ್ದೀನ್ ಜಮಾದಾರ್ ಪೋನ್ ಲೋಕೆಷನ್ ತೆಗೆದು ನೋಡಿದಾಗ ಮತ್ತು ಕೊನೆಯದಾಗಿ ಫೈಮುದ್ದೀನ್ ಜಮಾದಾರ್ ಜೊತೆಗೆ ಶಶಿಕಾಂತ ಇರುವುದನ್ನು ನೋಡಿದ್ದ ಓರ್ವನ ಹೇಳಿಕೆ ಆಧಾರದ ಮೇಲೆ ಈತನೇ ಏನೋ ಮಾಡಿದ್ದಾನೆ ಅಂದುಕೊಂಡು ತಮ್ಮದೇ ಭಾಷೆಯಲ್ಲಿ ವಿಚಾರಣೆ ನಡೆಸಿದಾಗ ತಾನೇ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ. ಅಷ್ಟಕ್ಕೂ ಯಾವ ಕಾರಣಕ್ಕೆ ಇಲ್ಲಿ ಕೊಲೆ ಆಗಿದೆ ಅಂದರೇ, ಅದು ಕೇವಲ 20ಸಾವಿರ ಹಣಕ್ಕಾಗಿ ಎಂಬುವುದು ಬಾಯಿ ಬಿಟ್ಟಿದ್ದಾನೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

