ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಕಬ್ಬಳ್ಳಿಗೆರೆ ಗ್ರಾಮದಲ್ಲಿ ರೀಲ್ಸ್ ಹುಚ್ಚಿನಿಂದ ವಿಜಿ ಕೊಪ್ಪಲು ಗ್ರಾಮದ 19 ವರ್ಷದ ಕಿರಣ್ ಸಾವನ್ನಪ್ಪಿದ್ದಾನೆ. ರೀಲ್ಸ್ ವಿಡಿಯೋ ಮಾಡಲು ಆತ ಅಪಾಯಕಾರಿಯಾಗಿ ಟ್ರ್ಯಾಕ್ಟರ್ ಚಾಲನೆ ಮಾಡಿದ್ದು, ಅದು ಪಲ್ಟಿ ಹೊಡೆದ ಪರಿಣಾಮ, ಅದರಡಿ ಸಿಲುಕಿ ಕಿರಣ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.ವರದಿಗಳ ಪ್ರಕಾರ ಕಿರಣ್ ರೀಲ್ಸ್ ತಯಾರಿಸುವ ಉತ್ಸಾಹದಲ್ಲಿ ಟ್ರ್ಯಾಕ್ಟರ್‌ನ್ನು ವೇಗವಾಗಿ ಚಾಲನೆ ಮಾಡಿದ್ದಾನೆ. ರಸ್ತೆ ತಿರುವಿನಲ್ಲಿ ಟ್ರ್ಯಾಕ್ಟರ್‌ನ ನಿಯಂತ್ರಣ ಕಳೆದುಕೊಂಡು ಅದು ಪಲ್ಟಿಯಾದ ಪರಿಣಾಮ ಕಿರಣ್ ಅದರಡಿ ಸಿಲುಕಿದ್ದಾನೆ.ಸ್ಥಳೀಯರು ಮತ್ತು ಯಸಳೂರು ಠಾಣೆ ಪೊಲೀಸರ ಸಹಾಯದಿಂದ ರಾಕಿದ್ ನನ್ನು ಮೇಲೆತ್ತಿ ತಕ್ಷಣವೇ ಶನಿವಾರಸಂತೆ ಅಸ್ಪತ್ರೆಗೆ ಕರೆದೊಯ್ಯಲಾಯಿತು. ನಂತರ ವೈದ್ಯರ ಸಲಹೆ ಮೇರೆಗೆ ಹಾಸನದ ಹಿಮ್ಸ್ಗೆ ಆಸ್ಪತ್ರೆಯಲ್ಲಿ ರಾಕಿದ್ ಹೆಚ್ಚಿನ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದ.
bigtvnews | Hubli Dharwad News | Kannada News | Karnataka News Hubli News | News In Hubli | Local news

