ಅತ್ಯಾಚಾರ ಪ್ರಕರಣದಲ್ಲಿ ಜೈಲು ಸೇರಿರುವ ಜೆಡಿಎಸ್ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಇದೀಗ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಗ್ರಂಥಾಲಯದ ಸಹಾಯಕ. ಈತನಿಗೆ ತಿಂಗಳಿಗೆ ಸುಮಾರು 5 ಸಾವಿರ ರು. ಕೂಲಿ ! ಮನೆಕೆಲಸದಾಳಿನ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಪ್ರಜ್ವಲ್ ತುತ್ತಾಗಿದ್ದಾರೆ.ಗ್ರಂಥಾಲಯದ ಸಹಾಯಕನನ್ನಾಗಿ ಪ್ರಜ್ವಲ್‌ರನ್ನು ನಿಯೋಜಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ದಿನಗೂಲಿ ಲೆಕ್ಕದಲ್ಲಿ ಕೆಲಸ ಮಾಡಿದ ದಿನ ಪ್ರಜ್ವಲ್ ಅವರಿಗೆ 525 ರು. ಕೂಲಿ ಸಿಗಲಿದೆ. ಅಂತೆಯೇ ಸಾಮಾನ್ಯವಾಗಿ ವಾರಕ್ಕೆ ಮೂರು ದಿನದಂತೆ ತಿಂಗಳಲ್ಲಿ ಸುಮಾರು 10-12 ದಿನ ಶ್ರಮದಾನವಿರಲಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

