ಬೆಂಗಳೂರು: ನಿಷೇಧಿತ ಚೈನೀಸ್ ಮಾಂಜಾ ದಾರಕ್ಕೆ ಸಿಲುಕಿ ಬೈಕ್ ಸವಾರರೊಬ್ಬರ ಕುತ್ತಿಗೆ ಭೀಕರವಾಗಿ ಸೀಳಿರುವ ಘಟನೆ ಹೆಗಡೆನಗರದ ಫ್ಲೈ ಓವರ್ ಮೇಲೆ ನಡೆದಿದ್ದು, ಐದು ದಿನಗಳ ಬಳಿಕ ಬೆಳಕಿಗೆ ಬಂದಿದೆ. ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ಗಾಳಿಯಲ್ಲಿ ಹಾರಿ ಬಂದ ಮಾಂಜಾ ದಾರ ಸವಾರನ ಕುತ್ತಿಗೆಗೆ ಸುತ್ತಿಕೊಂಡು ಆಳವಾದ ಗಾಯ ಉಂಟುಮಾಡಿದೆ. ತೀವ್ರ ರಕ್ತಸ್ರಾವವಾದರೂ ಸಮಯಪ್ರಜ್ಞೆಯಿಂದ ಬೈಕ್ ನಿಲ್ಲಿಸಿದ ಸವಾರ ಪ್ರಾಣಾಪಾಯದಿಂದ ಪಾರಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಿಷೇಧವಿದ್ದರೂ ಚೈನೀಸ್ ಮಾಂಜಾ ದಾರಗಳ ಅಕ್ರಮ ಮಾರಾಟ ಮತ್ತು ಬಳಕೆ ಮುಂದುವರಿದಿರುವುದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಾರಕ ದಾರ ಮಾರಾಟಗಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಹಾಗೂ ಫ್ಲೈ ಓವರ್‌ಗಳಲ್ಲಿ ಸುರಕ್ಷತಾ ಜಾಲರಿ ಅಳವಡಿಸುವಂತೆ ಆಗ್ರಹಿಸಿದ್ದಾರೆ.
Check Also
ಕೋಲಾರದಲ್ಲಿ ಮೂವರು ಮಕ್ಕಳ ಎದುರಲ್ಲೇ ಚಾಕುವಿನಿಂದ ಇರಿದು ಪತ್ನಿ ಹತ್ಯೆ : ಆರೋಪಿ ಪತಿ ಅರೆಸ್ಟ್!
ಕೋಲಾರ: ಜಿಲ್ಲೆಯ ಶ್ರೀನಿವಾಸಪುರ ಟೋಲ್ ಗೇಟ್ ಸಮೀಪ ಮೂವರು ಮಕ್ಕಳ ಎದುರೇ ಪತ್ನಿಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ …
bigtvnews | Hubli Dharwad News | Kannada News | Karnataka News Hubli News | News In Hubli | Local news
