ಹಣ ಮತ್ತು ಆಸ್ತಿಗಾಗಿ ನಿರಂತರವಾಗಿ ಜಗಳ ತೆಗೆಯುತ್ತಿದ್ದ ಮಗನೊಬ್ಬನನ್ನು ಆತನ ತಂದೆ, ತಾಯಿ ಹಾಗೂ ಯೋಧ ಸಹೋದರ ಸೇರಿ ಕೈ-ಕಾಲು ಕಟ್ಟಿ, ಡೀಸೆಲ್ ಸುರಿದು ಸುಟ್ಟು ಕೊಲೆ ಮಾಡಿರುವ ಘಟನೆ ಬಾಗಲಕೋಟೆಯ ಜಮಖಂಡಿ ತಾಲೂಕಿನ ಬಿದರಿ ಗ್ರಾಮದಲ್ಲಿ ನಡೆದಿದೆ.ಮೃತನನ್ನು ಅನಿಲ್ ಕಾನಟ್ಟಿ (32) ಎಂದು ಗುರುತಿಸಲಾಗಿದೆ. ಅನಿಲ್ ಮದ್ಯಪಾನ ಮತ್ತು ಆನ್‌ಲೈನ್ ಬೆಟ್ಟಿಂಗ್ ಸೇರಿದಂತೆ ಹಲವು ದುಶ್ಚಟಗಳಿಗೆ ದಾಸನಾಗಿದ್ದ. ಈಗಾಗಲೇ ಕುಟುಂಬದವರು ಆತನ ₹20 ಲಕ್ಷ ಸಾಲವನ್ನು ತೀರಿಸಿದ್ದರೂ, ಮತ್ತೆ ₹5 ಲಕ್ಷ ಕೇಳಿ ಮನೆಯವರ ಮೇಲೆ ಹಲ್ಲೆ ಮಾಡುತ್ತಿದ್ದ. ತನ್ನ ಪಾಲಿನ ಆಸ್ತಿ ನೀಡುವಂತೆ ನಿತ್ಯ ಜಗಳವಾಡುತ್ತಿದ್ದನು. ಅನಿಲ್‌ನ ಕೈ-ಕಾಲು ಕಟ್ಟಿ, ಕಣ್ಣಿಗೆ ಖಾರದಪುಡಿ ಎರಚಿ ಹಲ್ಲೆ ನಡೆಸಿದ ನಂತರ ಡೀಸೆಲ್ ಸುರಿದು ಬೆಂಕಿ ಹಚ್ಚಿ ಹತ್ಯೆ ಮಾಡಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಅನಿಲ್‌ನ ತಂದೆ ಪರಪ್ಪ (62), ತಾಯಿ ಶಾಂತಾ (55) ಮತ್ತು ಸಹೋದರ ಬಸವರಾಜರನ್ನು ಪೊಲೀಸರು ಬಂಧಿಸಿದ್ದಾರೆ. ಸಾವಳಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

