ಮಕ್ಕಳಿಲ್ಲದ ಹಿಂದೂ ವಿಧವೆಯ ಮರಣದ ನಂತರ, ಆಕೆಯ ಆಸ್ತಿ ಆಕೆಯ ಹೆತ್ತವರ ಬದಲು ಆಕೆಯ ಗಂಡನ ಕುಟುಂಬಕ್ಕೆ ಹೋಗುತ್ತದೆ ಎಂದು ಹೇಳುವ ಹಿಂದೂ ಉತ್ತರಾಧಿಕಾರ ಕಾಯ್ದೆ (ಎಚ್‌ಎಸ್‌ಎ)ಯ ನಿಬಂಧನೆಯನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯನ್ನು ಇಂದು (ಸೆ.24) ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ , ಹಿಂದೂ ಕಾನೂನಿನಡಿಯಲ್ಲಿ ಮಹಿಳೆ ಮದುವೆಯಾದಾಗ, ಆಕೆಯ ಗೋತ್ರವೂ ಬದಲಾಗುತ್ತದೆ ಎಂದು ಹೇಳಿದೆ.ಈ ಕುರಿತು ಸುಪ್ರೀಂ ಕೋರ್ಟ್ ಮಹತ್ವದ ಆದೇಶ ನೀಡಿದ್ದು, ಪ್ರಸ್ತುತ ಕಾನೂನಿನಡಿಯಲ್ಲಿ, ಆಸ್ತಿಯನ್ನು ಆಕೆಯ ತಾಯಿಯ ಕುಟುಂಬದ ಬದಲಿಗೆ, ಅತ್ತೆ-ಮಾವಂದಿರಿಗೆ ವರ್ಗಾಯಿಸಲಾಗುತ್ತದೆ ಎಂಬುದನ್ನು ಸ್ಪಷ್ಟಪಡಿಸಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

