ಇಟಲಿಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಭಾರತೀಯ ಕುಟುಂಬ ಬಲಿಯಾಗಿದೆ. ಯುರೋಪಿಯನ್ ಪ್ರವಾಸದಲ್ಲಿ ಭೀಕರ ಅಪಘಾತಕ್ಕೆ ಬಲಿಯಾ ದಂಪತಿಯನ್ನು ನಾಗ್ಪುರ ಮೂಲದ ಹೋಟೆಲ್ ಉದ್ಯಮಿ ಜಾವೇದ್ ಅಖ್ತರ್ ಮತ್ತು ಅವರ ಪತ್ನಿ ನಾದಿರಾ ಗುಲ್ಶನ್ ಎಂದು ಗುರುತಿಸಲಾಗಿದೆ.55 ವರ್ಷದ ಅಖ್ತರ್ ಮಹಾರಾಷ್ಟ್ರದ ನಾಗ್ಪುರದ ಪ್ರಸಿದ್ಧ ಹೋಟೆಲ್ ಉದ್ಯಮಿ. ಅವರು ಮತ್ತು ಅವರ ಪತ್ನಿ ಗುಲ್ಶನ್ ತಮ್ಮ ಮೂವರು ಮಕ್ಕಳಾದ ಅಜೂರ್ ಅಖ್ತರ್ ಮತ್ತು 21 ವರ್ಷದ ಶಿಫಾ ಅಖ್ತರ್ ಮತ್ತು ಮಗ ಜಾಜೆಲ್ ಅಖ್ತರ್ ಅವರೊಂದಿಗೆ ಮಿನಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ಇಟಲಿಯ ಗ್ರೊಸೆಟೊ ಬಳಿಯ ಔರೇಲಿಯಾ ಹೆದ್ದಾರಿಯಲ್ಲಿ ಅಪಘಾತಕ್ಕೀಡಾಯಿತು.
bigtvnews | Hubli Dharwad News | Kannada News | Karnataka News Hubli News | News In Hubli | Local news

