Breaking News

ಹುಬ್ಬಳ್ಳಿಯಲ್ಲಿ ಬಾರ್ ಗಳ ಹಾವಳಿ, ಆಸ್ಪತ್ರೆ ಎದುರುಗಡೆ ಬಾರ್&ರೆಸ್ಟೋರೆಂಟ್ ಗಳ ವ್ಯಾಪಾರ, ಸಂಭಂಧಿಸಿದ ಅಧಿಕಾರಿಗಳು ಲಂಚದ ಬಿಸ್ಕತ್ತ್ ತಿನ್ನುತ್ತಾ ಕುಳಿತ್ತಿದ್ದಿರಾ…?

ಹುಬ್ಬಳ್ಳಿ ಧಾರವಾಡ ಅವಳಿನಗರ ರಾಜ್ಯದಲ್ಲೆ ಬೆಳೆಯುತ್ತಿರುವ ಪ್ರಮಖ ನಗರಗಳಲ್ಲಿ ಒಂದು ನಗರ. ಈ ನಗರದಲ್ಲಿ ಈಗ ಕೈಂ ರೇಟ್‌ ಅಂತು ದಿನನಿತ್ಯ ಹೆಚ್ಚುತ್ತಿದೆ, ಮದ್ಯಪ್ರೀಯರು ದಿನನಿತ್ಯ ಮಾಡುವ ಅವಾಂತರಗಳಿಂದ ಗಲಾಟೆ , ಕಳ್ಳತನ, ಹಾಗೂ ಇತರೆ ಚಟುವಟಿಕೆಗಳು ಸಹ ಹೆಚ್ಚಾಗಿವೆ. ಈ ಎಲ್ಲದರ ನಡುವೆ ಮದ್ಯದ ಅಂಗಡಿಗಳು ಸಹ ಕಾನೂನು ನಿಯಮಗಳನ್ನು ಗಾಳಿಗೆ ತೂರಿ ದಿನನಿತ್ಯ ಪ್ರಾರಂಭ ಮಾಡುತ್ತೀವೆ, ಆಸ್ಫತ್ರೆ ಹಾಗೂ ಶಾಲಾ ಕಾಲೇಜು ಪಕ್ಕದಲ್ಲಿ ಮದ್ಯದ ಅಂಗಡಿಗಳು ಕಾನೂನು

ನಿಯಮಗಳನ್ನು ಸರಿಯಾಗಿ ಪಾಲನೆ ಮಾಡುತ್ತಿಲ್ಲ ,ಅದರಲ್ಲೂ ನಗರದ ಕೇಂದ್ರ ಬಿಂದು ಆಗಿರುವ ವಿದ್ಯಾನಗರ, ಮತ್ತು ಶಿರೂರ ಪಾರ್ಕ , ಮದ್ಯ ಮಾರಾಟ ಚುಟವಟಿಕೆ ಕಾರ್ಯದಲ್ಲಿ, ಎತ್ತಿದ ಕೈ , ಶಿರೂರು ಪಾರ್ಕ್ ನಲ್ಲಿ ಅತಿಹೆಚ್ಚು ಶ್ರೀಮಂತರು ಹಾಗೂ ಕಾಲೇಜು ವಿದ್ಯಾರ್ಥಿಗಳು ಹಾಗೂ ವ್ಯಾಪಾರಸ್ಥರು ಇರುವ ಜಾಗ ಆಗಿರುವದರಿಂದ ಮದ್ಯದ ಅಂಗಡಿಗಳು ಬೇಕಾಬಿಟ್ಟಿ ಪ್ರಾರಂಭವಾಗುತ್ತವೆ. ಇನ್ನು ಕಾಲೇಜು ವಿದ್ಯಾರ್ಥಿಗಳಿಗೆ ವಿಕೇಂಡ್ ಪಾರ್ಟಿ ಹಾಗೂ ಇತರೆ ಸಮಾರಂಭಗಳಲ್ಲಿ ಮೋಜು ಮಸ್ತಿ ಮಾಡುವ ಸಲುವಾಗಿ ಹುಬ್ಬಳ್ಳಿಯ ಶಿರೂರ ಪಾರ್ಕ್ ಸ್ಥಳವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಈ ಕಾರಣ ದಿಂದಲೇ ಈ ಸ್ಥಳದಲ್ಲಿ ಅತಿಹೆಚ್ಚು ಬಾರ್ ಅಂಗಡಿಗಳು ತಲೆ ಎತ್ತಿವೆ, ಶಿರೂರ ರ್ಪಾರ್ಕ್ ನಲ್ಲಿ ಅಂದಾಜು 10 ಕ್ಕೂ ಹೆಚ್ಚು ಬಾರ್ & ರೆಸ್ಟೋರೆಂಟ್ ಗಳು ಇವೆ , ಅಧಿಕಾರಿಗಳು ಅದು ಯಾವ ನಿಯಮದ ಪ್ರಕಾರ ಪರವಾನಿಗೆ ನೀಡಿದ್ದಾರೆ , ಎಂಬುದು ಇದುವರಗೆ ತಿಳಿದು ಬಂದಿಲ್ಲ , ಇದು ನಗರದಲ್ಲಿನ ಸಮಸ್ಯೆ ಯಾದರೆ ಇನ್ನು ಹುಬ್ಬಳ್ಳಿಯಿಂದ ಧಾರವಾಡಕ್ಕೆ ಸಂಪರ್ಕ ನೀಡುವ ರಸ್ತೆಯ ಅಕ್ಕಪಕ್ಕದಲ್ಲಿನ ಬಾರ್‌ ಗಳು ಸಹ ಕಾನೂನು ನಿಯಮಗಳನ್ನು ಪಾಲನೆ ಮಾಡದೆ ಇರುವುದು

ಕಂಡುಬಂದಿವೆ , ಇದರಿಂದ ಸ್ಮಾಟ್‌ ಸಿಟಿ ಎಂಬ ಹೆಗ್ಗಳಿಗೆ ಹೊಂದಿದ, ಹುಬ್ಬಳಿಗೆ ಬಾರ್‌ & ರೆಸ್ಟೋಂಟಗಳು ಮಸಿ ಬಳಿಯು ಕಾರ್ಯದಲ್ಲಿ ತೊಡಗಿವೆ. ಇನ್ನು ಗದಗ ನಗರಕ್ಕೆ ಸಂಪರ್ಕ ನೀಡುವ ಹೆದ್ದಾರಿಗಳಲ್ಲಿನ ದಾಭಾಗಳಲ್ಲಿ ಅಕ್ರಮವಾಗಿ ಯಾವುದೇ ರೀತಿಯ ಪರವಾನಿಗೆ ಇಲ್ಲದೆ ಮದ್ಯ ಮಾರಾಟ ಮಾಡಲಾಗುತ್ತದೆ ಎಂದು ತಿಳಿದು ಬಂದಿದೆ, ಇಷ್ಟ ಎಲ್ಲಾ ನೆಡೆಯುತ್ತಿದ್ದರು ಅಧಿಕಾರಿಗಳು ಮಾತ್ರ ಜಾಣ ಕುರುಡುತನವನ್ನು ಪ್ರರ್ದಶನ ಮಾಡುತ್ತಿದ್ದಾರೆ. ಇನ್ನಷ್ಟು ಬಾರ್ ಅಂಗಡಿಗಳ ಕರ್ಮಕಾಂಡದ ಕಥೆಯ ಇಂಚು ಇಂಚು ಮಾಹಿತಿಯನ್ನು ಮುಂದಿನ ಸಂಚಿಕೆಯಲ್ಲಿ ವೀಕ್ಷಿಸಿ ನಿಮ್ಮ ಬಿಗ್ ಟಿವಿಯಲ್ಲಿ….

Share News

About Shaikh BigTv

Check Also

TCS ನಾಸಿಕ್ ಪ್ರಕರಣ: ಆರೋಪಿ ನಿದಾ ಖಾನ್ ಪತಿ ಬಂಧನ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಶಾಖೆಯ ಸುತ್ತಲಿನ ವಿವಾದ ನಾಟಕೀಯ ತಿರುವು ಪಡೆದುಕೊಂಡಿದ್ದು, ಕಂಪನಿಗೆ ಸಂಬಂಧಿಸಿದ ಒಂಬತ್ತು …

Leave a Reply

Your email address will not be published. Required fields are marked *