Breaking News

ಯುವತಿಗೆ ಇನ್ಸ್ಟಾಗ್ರಾಮ್ ನಲ್ಲಿ ಮೆಸೇಜ್ ಮಾಡಿದ್ದನ್ನು ಪ್ರಶ್ನಿಸಿದಕ್ಕೆ, ಸ್ನೇಹಿತನಿಗೆ ಚಾಕು ಇರಿತ : ‘FIR’ ದಾಖಲು

ಬೆಂಗಳೂರಿನಲ್ಲಿ ಯುವತಿಯ ವಿಚಾರಕ್ಕೆ ವಿದ್ಯಾರ್ಥಿಗಳ ನಡುವೆ ಗಲಾಟೆ ನಡೆದಿದೆ. ಚಾಕು ತೋರಿಸಿ ರಸ್ತೆ ಮಧ್ಯೆ ವಿದ್ಯಾರ್ಥಿಗಳು ಪುಂಡಾಟ ಮೆರೆದಿದ್ದಾರೆ. ಆರ್ ಟಿ ನಗರದಲ್ಲಿ ಕಳೆದ ಮೂರು ದಿನಗಳ ಹಿಂದೆ ನಡೆದ ಘಟನೆ ಇದು ಈಗ ತಡವಾಗಿ ಬೆಳಕಿಗೆ ಬಂದಿದೆ.ಯುವತಿಗೆ ಇನ್ಸ್ಟಾಗ್ರಾಮ್ ನಲ್ಲಿ ಮೆಸೇಜ್ ಮಾಡಿದ್ದನ್ನು ಸ್ನೇಹಿತ ಪ್ರಶ್ನಿಸಿದ್ದಾನೆ ಒಂದೇ ಕ್ಲಾಸ್ನಲ್ಲಿ ಸ್ನೇಹಿತ ಮತ್ತು ಯುವತಿ ಕಲಿಯುತ್ತಿದ್ದಾರೆ. ಯುವತಿಗೆ ನಿರಂತರವಾಗಿ ಆರೋಪಿ ಪ್ರಭು ಮೆಸೇಜ್ ಮಾಡುತ್ತಿದ್ದ ಕಾಟ ಕೊಡುತ್ತಿದ್ದ. ಇದನ್ನು ಯುವತಿಯ ಸ್ನೇಹಿತ ಪ್ರಶ್ನೆ ಮಾಡಿದ್ದಾನೆ. ಇದೇ ಸಿಟ್ಟನ್ನು ಇಟ್ಟುಕೊಂಡ ಪ್ರಭು ಬೈಕ್ ನಲ್ಲಿ ಬಂದು ಚಾಕುವಿನಿಂದ ಇರಿದು ಪರಾರಿ ಆಗಿದ್ದಾನೆ ಆರ್ ಟಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು FIR ದಾಖಲಾಗಿದೆ.

Share News

About bigtvnews22

Check Also

TCS ನಾಸಿಕ್ ಪ್ರಕರಣ: ಆರೋಪಿ ನಿದಾ ಖಾನ್ ಪತಿ ಬಂಧನ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಶಾಖೆಯ ಸುತ್ತಲಿನ ವಿವಾದ ನಾಟಕೀಯ ತಿರುವು ಪಡೆದುಕೊಂಡಿದ್ದು, ಕಂಪನಿಗೆ ಸಂಬಂಧಿಸಿದ ಒಂಬತ್ತು …

Leave a Reply

Your email address will not be published. Required fields are marked *