Breaking News

ಕಾರವಾರ: ಹೃದಯಾಘಾತದಿಂದ ಸೈನಿಕ ಸಾವು!!!

ಪಂಜಾಬ್ ಫ್ರಂಟ್‍ಲೈನ್ ಬೆಟಾಲಿಯನ್‍ನಲ್ಲಿ ನಾಯಕ್ ಸುಬೇದಾರ್ ಆಗಿದ್ದ ವಿಜಯ ವಿಠ್ಠೋಬಾ ತಾಮ್ಸೆ (44) ಹೃದಯಾಘಾತದಿಂದ ಮಂಗಳವಾರ ಹರಿಯಾಣ ರಾಜ್ಯದ ಅಂಬಾಲಾದಲ್ಲಿ ನಿಧನರಾದರು.ಸೈನ್ಯದ ಪರೇಡ್ ವೇಳೆ ಎದೆ ನೋವಿನಿಂದ ವಿಜಯ ಕುಸಿದು ಬಿದ್ದರು.ಅವರನ್ನು ಆಸ್ಪತ್ರೆಗೆ ಕರೆದೊಯ್ಯವಷ್ಟರಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಸೇನೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ’ ಎಂದು ವಿಜಯ ಅವರ ಕುಟುಂಬ ಸದಸ್ಯರು ತಿಳಿಸಿದ್ದಾರೆ.’25 ವರ್ಷಗಳಿಂದ ಭಾರತೀಯ ಸೇನೆಯಲ್ಲಿದ್ದರು. ಸೈನ್ಯದಿಂದ ನಿವೃತ್ತರಾಗಲು ಮೂರು ವರ್ಷ ಬಾಕಿ ಇತ್ತು. ಮೃತರ ಅಂತ್ಯಕ್ರಿಯೆ ಗುರುವಾರ ಬೆಳಿಗ್ಗೆ ನಡೆಯಲಿದೆ’ ಎಂದು ತಿಳಿಸಿದ್ದಾರೆ. ಅವರಿಗೆ ಪತ್ನಿ, ಪುತ್ರ ಮತ್ತು ಪುತ್ರಿ ಇದ್ದಾರೆ.

Share News

About BigTv News

Check Also

ಶಾಸಕ ಉಮೇಶ್ ಮೇಟಿ ಸೊಸೆ ವಿರುದ್ಧ ಅಕ್ರಮ ಆರೋಪ; ಎಂಡಿ ಓದುವಾಗ ಸರ್ಕಾರಿ ವೈದ್ಯೆಯಾಗಿ ವೇತನ ಪಡೆದರಾ ಅಂಕಿತಾ!

ಬಾಗಲಕೋಟೆ: ಖಾಸಗಿ ಕಾಲೇಜಿನಲ್ಲಿ MD ವ್ಯಾಸಂಗ ಮಾಡುತ್ತಲೇ ‘ನಮ್ಮ ಕ್ಲಿನಿಕ್’ನಲ್ಲಿ ವೈದ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸದೆ ₹75 ಸಾವಿರ ಸರ್ಕಾರಿ ವೇತನ …

Leave a Reply

Your email address will not be published. Required fields are marked *