ಮನೆ ಮುಂದೆ ಶೋ ಗಿಡ ಎಂದು ಮರೆ ಮಾಚಿ ಬೆಳೆದಿದ್ದ ಗಾಂಜಾ ಗಿಡ ಸಹಿತ ಗಿಡ ಬೆಳೆದಿದ್ದ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದಿರುವ ಘಟನೆ ಅ.29ರ ಬುಧವಾರ ತಾಲೂಕಿನ ಶ್ರೀನಿವಾಸ ಅಗ್ರಹಾರದ ಬಳಿ ನಡೆದಿದೆ. ಮನೆ ಮುಂದೆ ಸುತ್ತಲೂ ಸೀರೆ ಕಟ್ಟಿ ಮಧ್ಯದಲ್ಲಿ 5 ಗಾಂಜಾ ಗಿಡವನ್ನು ಬೆಳೆದಿದ್ದು, ಸ್ಥಳಿಯರ ಮಾಹಿತಿ ಮೆರೆಗೆ ಡಿವೈಎಸ್ಪಿ ಶಾಂತ ಮಲ್ಲಪ್ಪ ಅವರ ಮಾರ್ಗದರ್ಶನದಲ್ಲಿ ಆತನ ಮನೆ ಮುಂದೆ ಪರಿಶೀಲಿಸಿದ ನಂತರ 5 ಗಾಂಜಾ ಗಿಡಗಳ, ಸುಮಾರು 9 ಕೆಜಿಯಷ್ಟು ತೂಕದ ಸುಮಾರು 3 ಲಕ್ಷ ರೂ. ಬೆಲೆ ಬಾಳುವ ಗಾಂಜಾವನ್ನು ವಶಕ್ಕೆ ಪಡೆದ ಪೊಲೀಸರು ಆರೋಪಿ ಸುರೇಶ ನನ್ನು ಬಂಧಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

