Breaking News

ನಕಲಿ ಚಿನ್ನವನ್ನು ಅಡವಿರಿಸಿ ಸಹಕಾರಿ ಸಂಘಕ್ಕೆ ವಂಚನೆ!

ಸಹಕಾರಿ ಸಂಘವೊಂದರಲ್ಲಿ ನಕಲಿ ಚಿನ್ನಾಭರಣ ಇರಿಸಿ ವಂಚಿಸಿದ ಪ್ರಕರಣದ ವಿರುದ್ಧ ದೂರು ದಾಖಲಾಗಿದೆ.ಸಂಸ್ಥೆಯ ಚಿನ್ನಪರೀಕ್ಷಕ ಚಿನ್ನವೆಂದು ದೃಢಪಡಿಸಿದ ಅನಂತರ 2 ಲಕ್ಷ ರೂ.ಸಾಲ ನೀಡಲಾಗಿತ್ತು. ಅನಂತರ ವಿನೋದ್ ಆ. 6ರಂದು ಬಂದು ನೆಕ್ಲೇಸ್ ಇರಿಸಿ 1.10 ಲಕ್ಷ ರೂ., ಆ. 26ರಂದು ಪುನಃ ಬಂದು ಸರ ಹಾಗೂ ಬ್ರೇಸ್‌ಲೆಟ್ ಇರಿಸಿ 1.10 ಲಕ್ಷ ರೂ. ಸಾಲ ಪಡೆದಿದ್ದ.5ರಂದು ಅಡವಿಟ್ಟಿದ್ದ ಚಿನ್ನವನ್ನು ಬಿಡಿಸಿ ಪುನಃ 2.10 ಲಕ್ಷ ರೂ. ಸಾಲ ಪಡೆದಿದ್ದ. ಈ ಮಧ್ಯೆ ನಕಲಿ ಚಿನ್ನಾಭರಣ ಇರಿಸಿ ವಂಚನೆ ಮಾಡಿರುವ ಬಗ್ಗೆ ವರದಿಯನ್ನು ನೋಡಿ ಅನುಮಾನಗೊಂಡ ಸಹಕಾರ ಸಂಘದವರು ಚಿನ್ನಾಭರಣ ಪರಿಶೀಲಿಸಿದಾಗ 101.850 ಗ್ರಾಂ ನಕಲಿ ಎನ್ನುವ ಮಾಹಿತಿ ತಿಳಿದು ಬಂದಿತ್ತು. ಈ ಬಗ್ಗೆ ಶಾಖೆಯ ಕಾರ್ಯನಿರ್ವಹಣಾಧಿಕಾರಿ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.

Share News

About BigTv News

Check Also

ಉಡುಪಿ: ಮದುವೆ ನಿರಾಕರಿಸಿದ ವ್ಯಕ್ತಿಯನ್ನು ಬೆದರಿಸಿ 42ಲಕ್ಷ ರೂ. ಹಣ ವಸೂಲಿ; ಶಿಕ್ಷಕಿ ಸಹಿತ ಇಬ್ಬರ ಬಂಧನ

ಉಡುಪಿ: ಮದುವೆ ಪ್ರಸ್ತಾಪ ನಿರಾಕರಿಸಿದ ವ್ಯಕ್ತಿಗೆ ಸುಳ್ಳು ಪ್ರಕರಣ ದಾಖಲಿಸುವುದಾಗಿ ಬೆದರಿಸಿ ₹42.97 ಲಕ್ಷ ವಸೂಲಿ ಮಾಡಿ ವಂಚಿಸಿದ ಆರೋಪದಲ್ಲಿ …

Leave a Reply

Your email address will not be published. Required fields are marked *