Breaking News

ಗ್ರಂಥಪಾಲಕ ರಾಮಚಂದ್ರಯ್ಯ ಆತ್ಮಹತ್ಯೆ: ಕಳಲುಘಟ್ಟ ಪಿಡಿಒ ಗೀತಾಮಣಿ ಅಮಾನತು

ನೆಲಮಂಗಲ ತಾಲ್ಲೂಕು, ಕಳಲುಘಟ್ಟ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗೀತಾಮಣಿ ಅವರನ್ನು ಅಮಾನತು ಮಾಡಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿ ಸಿಇಒ ಡಾ.ಕೆ.ಎಸ್‌.ಅನುರಾಧ ಅವರು ಆದೇಶ ಹೊರಡಿಸಿದ್ದಾರೆ.ಗೋವೆನಹಳ್ಳಿ ಗ್ರಾಮದ ರಾಮಚಂದ್ರಯ್ಯ ಅವರು ಅ.27 ರಂದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು.ರಾಮಚಂದ್ರಯ್ಯ ಅವರ ಸಾವಿಗೆ ಪಿಡಿಒ ಗೀತಾಮಣಿ ಕಾರಣ. ಸುಮಾರು ಮೂರು ತಿಂಗಳಿಂದ ವೇತನ ಪಾವತಿಸದೇ ಹಾಗೂ ಅವರು ಹಾಜರಾತಿ ತೋರಿಸಲು ಬಯೋ ಮೆಟ್ರಿಕ್ ಕೊಡದೆ ಕಿರುಕುಳ ನೀಡಿದ್ದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಅವರ ಸಹೋದರನ ಮಗ ಕಾಂತರಾಜು ಠಾಣೆಗೆ ದೂರು ನೀಡಿದ್ದರು.ಈ ಸಂಬಂಧ ಪಿಡಿಒ ಗೀತಾಮಣಿ(ಆರೋಪಿ-1) ವಿರುದ್ಧ ತ್ಯಾಮಗೊಂಡ್ಲು ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು.ಪಂಚಾಯಿತಿ ಸಿಬ್ಬಂದಿ ಮೃತಪಟ್ಟು 24 ಗಂಟೆ ಕಳೆದರೂ ಪಿಡಿಒ ಸಂಪರ್ಕಕ್ಕೆ ಸಿಕ್ಕಿಲ್ಲ. ಈ ಬಗ್ಗೆ ಮೇಲಾಧಿಕಾರಿಗಳಿಗೆ ಮಾಹಿತಿ ತಿಳಿಸದೆ ತೆರಳಿ ಲೋಪ ಎಸಗಿದ್ಧಾರೆ. ಅಲ್ಲದೇ ರಾಮಚಂದ್ರಯ್ಯ ಅವರಿಗೆ ವೇತನ ಪಾವತಿಸದೇ ಇರುವುದು ಕಂಡುಬಂದಿದೆ ಎಂದು ಅಮಾನತು ಆದೇಶದಲ್ಲಿ ತಿಳಿಸಲಾಗಿದೆ.

Share News

About BigTv News

Check Also

ಸಿಲಿಂಡರ್ ಸ್ಫೋಟಗೊಂಡು 20ಕ್ಕೂ ಹೆಚ್ಚು ಕಾರ್ಮಿಕರ ಶೆಡ್‌ಗಳು ಭಸ್ಮ!

ಕಲಬುರಗಿ ಜಿಲ್ಲೆಯ ಹೊನ್ನಕಿರಣಗಿ ಗ್ರಾಮದ ವ್ಯಾಪ್ತಿಯಲ್ಲಿ ನಿರ್ಮಾಣ ಹಂತದಲ್ಲಿರುವ ಗುಲ್ಬರ್ಗಾ ಸಿಮೆಂಟ್ ಕಾರ್ಖಾನೆಯಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಭಾರೀ ಅಗ್ನಿ …

Leave a Reply

Your email address will not be published. Required fields are marked *