Breaking News

ಚೆಕ್‌ ಅಮಾನ್ಯ; ಆರೋಪಿ ಖುಲಾಸೆ

ಮಂಗಳೂರು: ಚೆಕ್‌ ಅಮಾನ್ಯ ಪ್ರಕರಣವೊಂದರ ಆರೋಪಿಯನ್ನು ಮಂಗಳೂರಿನ 5ನೇ ಹೆಚ್ಚುವರಿ ಜೆಎಂಎಫ್‌ಸಿ ಸಿವಿಲ್‌ ನ್ಯಾಯಾಲಯ ಖುಲಾಸೆಗೊಳಿಸಿದೆ.ಉಡುಪಿ ನಿವಾಸಿ ಅಶ್ವಿತ್‌ ಶೇಣವ ಖುಲಾಸೆಗೊಂಡವರು. ಅವರು ಬ್ಯಾಂಕೊಂದರ ಮಂಗಳೂರು ಶಾಖೆಯಿಂದ 6,50,826 ರೂ. ಸಾಲ ಪಡೆದಿದ್ದು ಮರುಪಾವತಿಗಾಗಿ ಚೆಕ್‌ ನೀಡಿದ್ದರು.ಅದನ್ನು ನಗದೀಕರಣಕ್ಕೆ ಹಾಕಿದಾಗ ಅಮಾನ್ಯಗೊಂಡಿದ್ದರಿಂದ ಅವರ ವಿರುದ್ಧ ಪ್ರಕರಣ ದಾಖಲಾಗಿತ್ತು. ನ್ಯಾಯಾಧೀಶರಾದ ಚಿರಾಗ್‌ ಸಿ. ಅವರು ಆರೋಪಿಯ ಪರ ವಕೀಲ ಗುರುರಾಜ್‌ ಜಿ.ಎಸ್‌. ಮಟ್ಟು ಅವರ ವಾದವನ್ನು ಎತ್ತಿ ಹಿಡಿದು ಆರೋಪಿಯನ್ನು ದೋಷಮುಕ್ತಗೊಳಿಸಿ ಆದೇಶ ನೀಡಿದ್ದಾರೆ.

Share News

About BigTv News

Check Also

ಮದುವೆಯಾಗಿ ಮಕ್ಕಳಿದ್ರೂ ಅಕ್ರಮ ಸಂಬಂಧ: ರೈಲಿಗೆ ತಲೆಕೊಟ್ಟು ವಿವಾಹಿತೆಯೊಂದಿಗೆ ಯುವಕ ಆತ್ಮಹತ್ಯೆ

ಮಂಡ್ಯದ ವಿಸಿ ಫಾರಂ ರಸ್ತೆಯ ರೈಲ್ವೆ ಹಳಿಯಲ್ಲಿ ರೈಲಿಗೆ ತಲೆಕೊಟ್ಟು ವಿವಾಹಿತೆ ಸಹನಾ (25) ಮತ್ತು ರಾಹುಲ್ (23) ಆತ್ಮಹತ್ಯೆಗೆ …

Leave a Reply

Your email address will not be published. Required fields are marked *