Breaking News

ಆನೇಕಲ್: ಬರ್ತ್​ಡೇ ಪಾರ್ಟಿ ಕೊಲೆಯಲ್ಲಿ ಅಂತ್ಯ; ಸ್ನೇಹಿತರಿಂದಲೇ ಬರ್ತ್ ಡೇ ಬಾಯ್​​ ಹತ್ಯೆ!!

ಅಕ್ಟೋಬರ್ 16ರಂದು ಸಂದೀಪ್​ ಬರ್ತ್​ಡೇ ಇತ್ತು. ಪಾರ್ಟಿಗೆಂದು ಸ್ನೇಹಿತರನ್ನು ಬಾರ್​ಗೆ ಕರೆದುಕೊಂಡು ಹೋಗಿದ್ದರು. ಪಾರ್ಟಿ ಮುಗಿದ ಬಳಿಕ ಸಂದೀಪ್ ಬಿಲ್ ಕಟ್ಟಿದ್ದರು. ಆದರೆ 2ನೇ ಸಲ‌ ಬಿಲ್‌ ಕಟ್ಟುವಂತೆ ಸ್ನೇಹಿತರು ಸಂದೀಪ್​ಗೆ ಒತ್ತಾಯಿಸಿದ್ದಾರೆ. ಹಣ ಇಲ್ಲ ಎಂದಿದ್ದಕ್ಕೆ ಬಾರ್ ಬಳಿ ಸಂತೋಷ್ ಗಲಾಟೆ ಮಾಡಿದ್ದರು. ಇದರಿಂದ ಬೇಸರಗೊಂಡು ಸಂದೀಪ್ ವಾಪಸ್‌ ಊರಿಗೆ ಬಂದಿದ್ದರು.ಅಷ್ಟಕ್ಕೆ ಸುಮ್ಮನಾಗದ ಸಂತೋಷ್ ಹಾಗೂ ಸಾಗರ್​​ ವಾಲಿಬಾಲ್ ಕೋರ್ಟ್ ಬಳಿ ಕರೆಸಿ ಸಂದೀಪ್​ ಮೇಲೆ ಹಲ್ಲೆ ಮಾಡಿದ್ದಾರೆ. ಹಲ್ಲೆ ವೇಳೆ ಸಂದೀಪ್ ತಲೆಗೆ ಗಂಭೀರ ಗಾಯವಾಗಿದೆ. ಘಟನೆ ನಡೆದ 3 ದಿನದ ನಂತರ ಸಂದೀಪ್ ಬ್ರೈನ್​ನಲ್ಲಿ ಬ್ಲಡ್ ಕ್ಲಾಟ್ ಆಗಿದ್ದು, ಆನಂತರ ಪೋಷಕರು ಆತನನ್ನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆಸ್ಪತ್ರೆಯಲ್ಲಿ ಕೆಲ ದಿನಗಳಿಂದ ಕೋಮಾದಲ್ಲಿ ಇದ್ದ ಸಂದೀಪ್, 2 ದಿನಗಳ ಹಿಂದೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.

Share News

About BigTv News

Check Also

ಕೋಲಾರದಲ್ಲಿ ರೈತರು-ಅರಣ್ಯ ಇಲಾಖೆ ಮಧ್ಯೆ ಸಂಘರ್ಷ: ಸಿಬ್ಬಂದಿ ಮೇಲೆ ಮಚ್ಚಿನಿಂದ ಅಟ್ಯಾಕ್‌

ಕೋಲಾರ: ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಮಲ್ಲಂಪಲ್ಲಿ ಗ್ರಾಮದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಮೇಲೆ ಮಚ್ಚಿನಿಂದ ಹಲ್ಲೆ ನಡೆದಿದ್ದು, ಮೂವರು ಗಂಭೀರವಾಗಿ …

Leave a Reply

Your email address will not be published. Required fields are marked *