Breaking News

ಬಾಲ ಕಾರ್ಮಿಕ ಪದ್ಧತಿ ಅಪರಾಧ; ಅಧಿಕಾರಿಗಳಿಂದ ಜನತೆಗೆ ಅರಿವು ಕಾರ್ಯಕ್ರಮ

ಕುಂದಗೋಳ: ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸಂಘ, ಕಾರ್ಮಿಕ ಇಲಾಖೆ, ಕಂದಾಯ ಇಲಾಖೆ, ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಕಾರ್ಖಾನೆಗಳು ಹಾಗೂ ಬಾಯ್ಲರ್‌ಗಳ ಇಲಾಖೆ, ಮಕ್ಕಳ ರಕ್ಷಣಾ ಘಟಕ ಇವರುಗಳ ಸಹಯೋಗದಲ್ಲಿ ಕುಂದಗೋಳ ತಾಲೂಕುಗಳ ವ್ಯಾಪ್ತಿಯಲ್ಲಿ ಜಿಲ್ಲಾಧಿಕಾರಿಗಳ ಆದೇಶದನ್ವಯ ಬಾಲ ಕಾರ್ಮಿಕ ಮತ್ತು ಕಿಶೋರ ಕಾರ್ಮಿಕ ಗುರುತಿಸಿ ತಿಳುವಳಿಕೆ ಹೇಳಲಾಯಿತು.

ಕುಂದಗೋಳ ತಾಲೂಕಿನಲ್ಲಿ ತಹಶೀಲ್ದಾರ್ ಅವರ ನೇತೃತ್ವದಲ್ಲಿ ಬಾಲಕಾರ್ಮಿಕ ಮತ್ತು ಕಿಶೋರ ಕಾರ್ಮಿಕ ಕಾಯ್ದೆ 1986 ರ (ನಿಷೇಧ ಮತ್ತು ನಿಯಂತ್ರಣ) ಅಡಿ ನೇಮಕಗೊಂಡ ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಕುಂದಗೋಳ ಪಟ್ಟಣದಲ್ಲಿ ವಿವಿಧ ಅಂಗಡಿ, ಹೋಟೆಲ್, ಗ್ಯಾರೇಜ, ಬೇಕರಿ ಮತ್ತು ಇತರೆ ಸಂಸ್ಥೆಗಳಲ್ಲಿ ತಪಾಸಣೆ ನಡೆಸಲು ನಿರ್ಧರಿಸಿದ ಅಧಿಕಾರಿಗಳು ಅಂಗಡಿ, ಹೋಟೆಲ್, ಗ್ಯಾರೇಜ್, ಬೇಕರಿ ಮತ್ತು ಇತರೆ ಸಂಸ್ಥೆಗಳಲ್ಲಿ ತಪಾಸಣೆ ನಡೆಸುವ ಸಮಯದಲ್ಲಿ ಕಂಡು ಬಂದ ಕಿಶೋರ ಕಾರ್ಮಿಕರಿಗೆ ಮತ್ತು ಮಾಲಿಕರಿಗೆ ಕರಪತ್ರ ನೀಡಿ ಹಾಗೂ ಪೋಸ್ಟರಗಳನ್ನು ಭೇಟಿ ನೀಡಿದ ಸಂಸ್ಥೆಗಳಲ್ಲಿ ಅಂಟಿಸಿ ಜಾಗೃತಿ ಮೂಡಿಲಾಯಿತು.

Share News

About admin

Check Also

ಹುಬ್ಬಳ್ಳಿಯಲ್ಲಿ ಮಾಂಜಾ ದಾರಕ್ಕೆ ಮಹಿಳೆ ಬಲಿ..! ಕುತ್ತಿಗೆಗೆ ಸಿಲುಕಿದ ದಾರ, ಲ್ಯಾಬ್ ಟೆಕ್ನಿಷಿಯನ್ ದಾರುಣ ಸಾವು..!

News Audio ಸ್ಕೂಟಿಯಲ್ಲಿ ಲ್ಯಾಬ್‌ಗೆ ತೆರಳುತ್ತಿದ್ದಾಗ ಅವಘಡ | ರಸ್ತೆಯಲ್ಲೇ ತೀವ್ರ ರಕ್ತಸ್ರಾವ, ಮಾಂಜಾ ದಾರದ ಅಪಾಯಕ್ಕೆ ಮತ್ತೊಂದು ಜೀವ …

Leave a Reply

Your email address will not be published. Required fields are marked *