Breaking News

ಸೈಡ್‌ ಕೊಡದಿದ್ದಕ್ಕೆ ಬೈಕ್‌ಗೆ ಕಾರು ಗುದ್ದಿಸಿ ಗುಂಡಾವರ್ತನೆ: ಚಾಲಕನ ಕೃತ್ಯ ಕ್ಯಾಮೆರಾದಲ್ಲಿ ಸೆರೆ

ಸೈಡ್ ಕೊಡದ ವಿಚಾರಕ್ಕೆ ಕೋಪಗೊಂಡ ಕ್ಯಾಬ್ ಚಾಲಕನೊಬ್ಬ ದುಂಡಾವರ್ತನೆ ತೋರಿದ ಘಟನೆ ನಗರದ ಕೆ.ಆರ್.ಪುರದ ಬಳಿ ನಡೆದಿದೆ.ಬೈಕ್ ಸವಾರನೊಬ್ಬ ಸೈಡ್ ಕೇಳಿದಾಗ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದ್ದು, ನಂತರ ಕ್ಯಾಬ್ ಚಾಲಕ ಕಾರನ್ನು ಮುಂದೆ ತೆಗೆದುಕೊಂಡು ಹೋಗಿ ಬೈಕ್‌ಗೆ ನೇರವಾಗಿ ಗುದ್ದಿಸಿದ್ದಾನೆ.ಇದರಿಂದ ಬೈಕ್ ಸವಾರ ರಸ್ತೆ ಮೇಲೆ ಬಿದ್ದು ಗಾಯಗೊಂಡಿದ್ದಾನೆ. ಈ ಸಂಪೂರ್ಣ ಘಟನೆ ಮತ್ತೊಂದು ಕಾರಿನ ಡ್ಯಾಶ್ ಕ್ಯಾಮೆರಾದಲ್ಲಿ ಸೆರೆಯಾಗಿ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.ಕ್ಯಾಬ್ ಚಾಲಕನ ಅಕ್ರಮ ವರ್ತನೆ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದು, ಆತನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ. ಟ್ರಾಫಿಕ್ ನಿಯಮ ಉಲ್ಲಂಘನೆ ಮಾಡಿದ ಕ್ಯಾಬ್ ಚಾಲಕನನ್ನು ಪೊಲೀಸರು ಶೀಘ್ರವೇ ಬಂಧಿಸಬೇಕೆಂಬ ಮನವಿ ಕೂಡ ನೆಟ್ಟಿಗರಿಂದ ಕೇಳಿಬಂದಿದೆ.

Share News

About BigTv News

Check Also

ವಿಟ್ಲ: 35 ಬಾರಿ ವಾರಂಟ್ ಜಾರಿಯಾಗಿದ್ದ ಆರೋಪಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂಧನ

ಕಳೆದ ಒಂಬತ್ತು ವರ್ಷಗಳಿಂದ ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ, ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಕುಖ್ಯಾತ ಆರೋಪಿಯನ್ನು ವಿಟ್ಲ …

Leave a Reply

Your email address will not be published. Required fields are marked *