Breaking News

ಬೈಕ್‌ಗೆ ಗೂಡ್ಸ್‌ ವಾಹನ ಡಿಕ್ಕಿ: ಸವಾರ ದುರ್ಮರಣ

ಬಾಣಸವಾಡಿ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ವೇಗವಾಗಿ ಬಂದ ಗೂಡ್ಸ್‌ ವಾಹನವೊಂದು ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿ ಮೃತಪಟ್ಟಿದ್ದಾರೆ. ನೇಪಾಳ ಮೂಲದ ಹೂಡಿ ನಿವಾಸಿ ನರೇಶ್‌ ಕುಮಾರ್‌(32) ಮೃತಪಟ್ಟವರು. ಸಂಬಂಧಿಕರೊಬ್ಬರ ಮನೆಯಲ್ಲಿದ್ದ ದೇವರ ಕಾರ್ಯದ ಸಲುವಾಗಿ ಗುರುವಾರ ರಾತ್ರಿ ಅವರ ಮನೆಗೆ ನರೇಶ್‌ ಕುಮಾರ್‌ತೆರಳಿದ್ದರು.ಊಟ ಮಾಡಿ ಮುಂಜಾನೆ 1.20ರ ಸುಮಾರಿನಲ್ಲಿ ಬೈಕ್‌ನಲ್ಲಿ ಮನೆಗೆ ಹಿಂದಿರುಗುತ್ತಿದ್ದಾಗ ಮಾರ್ಗಮಧ್ಯೆ ರಾಮಮೂರ್ತಿ ನಗರದ ಬಿ.ಚನ್ನಸಂದ್ರ ಮುಖ್ಯರಸ್ತೆಯ ಬಳಿ ಹಿಂದಿನಿಂದ ವೇಗವಾಗಿ ಬಂದ ಗೂಡ್ಸ್‌ ವಾಹನ ಇವರ ಬೈಕ್‌ಗೆ ಡಿಕ್ಕಿ ಹೊಡೆದಿತ್ತು. ಪರಿಣಾಮ ನರೇಶ್‌ ಕುಮಾರ್‌ ರಸ್ತೆಗೆ ಬಿದ್ದಿದ್ದರು. ಅವರ ಮೇಲೆ ವಾಹನದ ಮುಂಭಾಗದ ಚಕ್ರ ಹರಿದಿದ್ದರಿಂದ ಗಂಭೀರ ಗಾಯಗೊಂಡರು. ಅವರನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದಾಗ ವೈದ್ಯರು ಪರೀಕ್ಷಿಸಿ ಮಾರ್ಗಮಧ್ಯೆಯೇ ಮೃತ ಪಟ್ಟಿರು ವುದನ್ನು ದೃಢಪಡಿಸಿದ್ದರು. ರಸ್ತೆ ಅಪಘಾತಕ್ಕೊಳಗಾದ ವಾಹನ ಚಾಲಕ ವಾಹನವನ್ನು ಸ್ಥಳದಲ್ಲಿ ನಿಲ್ಲಿಸದೇ ಚಾಲನೆ ಮಾಡಿಕೊಂಡು ಪರಾರಿಯಾಗಿದ್ದಾನೆ.

Share News

About BigTv News

Check Also

ಪ್ರೇಯಸಿ ಕರೆದಿದ್ದಕ್ಕೆ ಬಂದ ಯುವಕ ಸಿಕ್ಕಿಬಿದ್ದ: ಸ್ನೇಹಿತರ ಸಮೇತ ಕಂಬಕ್ಕೆ ಕಟ್ಟಿ ಥಳಿಸಿದ ಗ್ರಾಮಸ್ಥರು!

ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ತಾಲೂಕಿನ ಬತ್ತಿಕೊಪ್ಪ ಗ್ರಾಮದಲ್ಲಿ ಪ್ರೀತಿಸಿದ ಯುವತಿಯನ್ನು ಮದುವೆಯಾಗಲು ಬಂದ ಪ್ರಮೋದ್ ಹಾಗೂ ಆತನ ಸ್ನೇಹಿತರಾದ ಪ್ರಕಾಶ್, …

Leave a Reply

Your email address will not be published. Required fields are marked *