Breaking News

ಇನ್ಸ್ಪೆಕ್ಟರ್ ಭ್ರಷ್ಟಾಚಾರ ಬಯಲು!!ಕಾಯುವವರೇ ಬಕ್ಷಕರದಾರ?

ರಕ್ಷಕನೇ ಭಕ್ಷಕ! ಸಾಮೂಹಿಕ ಅತ್ಯಾಚಾರ ಕೇಸ್‌ನಲ್ಲಿ 2 ಲಕ್ಷ ಲಂಚ ಪಡೆದ ಇನ್ಸೆಕ್ಟ‌ರ್

ಸಾಮೂಹಿಕ ಅತ್ಯಾಚಾರ ಪ್ರಕರಣದಿಂದ ಆರೋಪಿಯ ಹೆಸರನ್ನು ಕೈಬಿಡಲು 2 ಲಕ್ಷ ರೂ. ಲಂಚ ಪಡೆಯುವಾಗ ಇನ್ಸ್‌ಪೆಕ್ಟರ್ ಒಬ್ಬರು ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಬಲೆಗೆ ಬಿದ್ದಿದ್ದಾರೆ.ನಿಶಾತ್‌ಗಂಜ್‌ ಹೊರಠಾಣೆಯ ಉಸ್ತುವಾರಿ ಅಧಿಕಾರಿಯಾಗಿದ್ದ ಇನ್ಸ್‌ಪೆಕ್ಟ‌ರ್ ಧನಂಜಯ್ ಸಿಂಗ್ ಎಂಬುವರು ಬರೋಬ್ಬರಿ ಎರಡು ಲಕ್ಷ ರೂಪಾಯಿ ಲಂಚ ಪಡೆಯುವಾಗ ಎಸಿಬಿ ಬಲೆಗೆ ಬಿದ್ದಿದ್ದಾರೆ.

ಸಾಮೂಹಿಕ ಅತ್ಯಾಚಾರ ಪ್ರಕರಣದಿಂದ ಕೋಚಿಂಗ್ ಸೆಂಟರ್ ಮಾಲೀಕ ಪ್ರತೀಕ್ ಗುಪ್ತಾ ಅವರ ಹೆಸರನ್ನು ಕೈಬಿಡಲು ಇವರು ಹಣಕ್ಕೆ ಬೇಡಿಕೆ ಇಟ್ಟಿದ್ದರು. ತಾನು ಮಾಡದ ಅಪರಾಧಕ್ಕೆ ಹಣ ಪಾವತಿಸಲು ಇಷ್ಟಪಡದ ಪ್ರತೀಕ್, ಎಸಿಬಿಯನ್ನು ಸಂಪರ್ಕಿಸಿದ್ದು, ಅಧಿಕಾರಿಗಳು ಖೆಡ್ಡಾ ತೋಡಿ ಇನ್ಸ್‌ಪೆಕ್ಟ‌ರ್ ಅನ್ನು ರೆಡ್‌ಹ್ಯಾಂಡ್ ಆಗಿ ಹಿಡಿದಿದ್ದಾರೆ.ಪ್ರಕರಣ ದಾಖಲಿಸಿದ ಪೊಲೀಸರು ತಮ್ಮ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ಪ್ರತೀಕ್‌ನಿಂದ ಹಣ ವಸೂಲಿ ಮಾಡಲು ಮುಂದಾದರು. ಪ್ರಕರಣದಿಂದ ಹೆಸರು ಕೈಬಿಡಬೇಕಾದರೆ 2 ಲಕ್ಷ ರೂಪಾಯಿ ಲಂಚ ಕೊಡಬೇಕೆಂದು ಇನ್ಸೆಕ್ಟ‌ರ್ ಧನಂಜಯ್ ಸಿಂಗ್ ಒತ್ತಾಯಿಸಿದರು. ಇದರಿಂದ ಬೇಸತ್ತ ಪ್ರತೀಕ್, ಅಂತಿಮವಾಗಿ ಎಸಿಬಿ ಅಧಿಕಾರಿಗಳನ್ನು ಸಂಪರ್ಕಿಸಿ ನ್ಯಾಯ ಕೋರಿದರು..

Share News

About admin

Check Also

ರಾಯಚೂರಿನಲ್ಲಿ ದಂಪತಿ ಸೇರಿ ನಾಲ್ವರು ಸಾವು; ಪತ್ನಿ, ಮಕ್ಕಳನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ!

ರಾಯಚೂರು: ವೈಯಕ್ತಿಕ ವ್ಯವಹಾರದಲ್ಲಿ ಭಾರಿ ನಷ್ಟ ಉಂಟಾದ ಹಿನ್ನೆಲೆಯಲ್ಲಿ ಪತಿಯೇ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಉಸಿರುಗಟ್ಟಿಸಿ ಕೊಲೆ ಮಾಡಿ, …

Leave a Reply

Your email address will not be published. Required fields are marked *