Breaking News

ಎಟಿಎಂ ದರೋಡೆ: ನಾಲ್ವರು ಅಂತರಾಜ್ಯ ಖದೀಮರ ಬಂಧನ

ಬೀದರ್: ಭಾಲ್ಕಿಯ ಹಿರೇಮಠ ಸಂಸ್ಥಾನ ಕಾಂಪ್ಲೆಕ್ಸ್‌ನಲ್ಲಿರುವ ಎಸ್‌ಬಿಐ ಎಟಿಎಂ ಯಂತ್ರವನ್ನು ಗ್ಯಾಸ್ ಕಟರ್‌ನಿಂದ ಕತ್ತರಿಸಿ ₹23.86 ಲಕ್ಷ ದೋಚಿದ್ದ ಪ್ರಕರಣವನ್ನು ಐದೇ ದಿನಗಳಲ್ಲಿ ಭೇದಿಸುವಲ್ಲಿ ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ತನಿಖೆ ನಡೆಸಿದ ವಿಶೇಷ ಪೊಲೀಸ್ ತಂಡಗಳು ಹೈದರಾಬಾದ್‌ನ ಶಾಹಿನ್‌ನಗರದಲ್ಲಿ ಕಾರ್ಯಾಚರಣೆ ನಡೆಸಿ ಹರಿಯಾಣ ಮೂಲದ ಶೋಹರಬ್, ಆಸಿಫ್, ಅನೀಶ್ ಹಾಗೂ ರಾಜಸ್ಥಾನದ ರಾಹುಲ್ ಎಂಬ ನಾಲ್ವರು ಆರೋಪಿಗಳನ್ನು ಬಂಧಿಸಿವೆ. ಬಂಧಿತರಿಂದ ₹12 ಲಕ್ಷ ನಗದು, ₹20 ಲಕ್ಷ ಮೌಲ್ಯದ ಕ್ರೆಟಾ ಕಾರು ಸೇರಿದಂತೆ ಗ್ಯಾಸ್ ಕಟರ್, ಮೊಬೈಲ್‌ಗಳು, ವಿವಿಧ ರಾಜ್ಯಗಳ 11 ನಂಬರ್ ಪ್ಲೇಟ್‌ಗಳು ಹಾಗೂ ಕೃತ್ಯಕ್ಕೆ ಬಳಸಿದ್ದ ಇತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಕರಣ ಭೇದಿಸಿದ ಪೊಲೀಸ್ ತಂಡದ ಕಾರ್ಯವನ್ನು ಜಿಲ್ಲಾ ಎಸ್‌ಪಿ ಪ್ರದೀಪ ಗುಂಟಿ ಪ್ರಶಂಸಿಸಿದ್ದಾರೆ.

Share News

About BigTv News

Check Also

ದಾವಣಗೆರೆಯಲ್ಲಿ ಗಾಂಜಾ ದಂಧೆಗೆ ಖಾಕಿ ಶಾಕ್..! ನಾಲ್ವರು ಅರೆಸ್ಟ್, 2.5 ಕೆಜಿ ಗಾಂಜಾ ಸೀಜ್!

ಗಾಂಜಾ ದಂಧೆಕೋರರಿಗೆ ಆಜಾದ್ ನಗರ ಪೊಲೀಸರ ಬೇಟೆ..! ₹1.25 ಲಕ್ಷದ ಮಾಲು ವಶ, ಎರಡು ಬೈಕ್ ಜಪ್ತಿ! ದಾವಣಗೆರೆಯಲ್ಲಿ ಗಾಂಜಾ …

Leave a Reply

Your email address will not be published. Required fields are marked *