Breaking News

ಅಪಘಾತದಲ್ಲಿ ಪೋಷಕರಿಗೆ ಗಂಭೀರ ಗಾಯ, ಕಂದನ ಎದೆಗಪ್ಪಿ ಚಿಕಿತ್ಸೆಗಾಗಿ ಅಲೆದಾಡಿದ ಮಹಾತಾಯಿ.

ಅಫಾಘಾತದಲ್ಲಿ ಹಲವು ಗಾಯಗೊಂಡಿದ್ದಾರೆ. ಈ ಪೈಕಿ ಪೋಷಕರು ಹಾಗೂ ಮೂರು ತಿಂಗಳ ಮಗು ಕೂಡ ಸೇರಿತ್ತು. ಪೋಷಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಆದರೆ ಮಗುವಿನ ಮೇಲ್ನೋಟಕ್ಕೆ ಗಾಯವಿಲ್ಲ. ಆದರೆ ಮೂರು ತಿಂಗಳ ಹಸುಗೂಸು, ಹೀಗಾಗಿ ತಲೆ ಸ್ಕ್ಯಾನಿಂಗ್ ಸೇರಿದಂತೆ ಪರೀಕ್ಷೆಗಳು ಅನಿವಾರ್ಯವಾಗಿತ್ತು.ಯೋಗೇಶ್ ಆಚಾರ್ಯ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಈ ಕುರಿತು ಬರೆದುಕೊಂಡಿದ್ದಾರೆ. ನಡೆದ ಘಟನೆಯನ್ನು ವಿವರಿಸಿದ್ದಾರೆ. ಮಂಗಳೂರಿನಿಂದ ಸುಳ್ಯ ಬರುತ್ತಿದ್ದ ನಾನು ಸಂಪ್ಯ ದಾಟಿ ಮುಂದೆ ಬರುತ್ತಿದ್ದಂತೆ ಭೀಕರ ಅಪಘಾತದ ಮಾಹಿತಿ ಬಂತು,ತಕ್ಷಣ ನಾನು AIKMCC ಅಂಬುಲನ್ಸ್ ನೊಂದಿಗೆ ಮೆಡ್ ಲ್ಯಾನ್ಡ್ ಆಸ್ಪತ್ರೆಯತ್ತ ಧಾವಿಸಿ ಬಂದೆ,ಹಲವರು ತೀವ್ರ ಗಾಯಗೊಂಡಿದ್ದರು,ಅವರಲ್ಲಿ ಇಬ್ಬರನ್ನು ಮಂಗಳೂರು ಶಿಫ್ಟ್ ಮಾಡಿದೆವು ಎಂದು ಯೋಗೇಶ್ ಆಚಾರ್ಯ ಹೇಳಿಕೊಂಡಿದ್ದಾರೆ. ಉಳಿದವರ ಆರೋಗ್ಯ ವಿಚಾರಿಸುತ್ತಾ ಆಸ್ಪತ್ರೆಯ ತೀವ್ರ ನಿಘಾ ಘಟಕದ ಒಳಗಿದ್ದಾಗ ಮಹಿಳೆಯೊಬ್ಬರು ಅಂದಾಜು ಮೂರು ತಿಂಗಳ ಮಗುವೊಂದನ್ನು ಎದೆಗೆ ಅಪ್ಪಿ ಹಿಡಿದು ಓಡೋಡಿ ಬಂದು ನನ್ನ ಅಂಬುಲನ್ಸ್ ನಲ್ಲಿ ಕುಳಿತು ಸರಕಾರಿ ಆಸ್ಪತ್ರೆಗೆ ಹೋಗುವಂತೆ ಸೂಚಿಸಿದರು,ಕೆಲವೇ ನಿಮಿಷಗಳಲ್ಲಿ ಸರಕಾರಿ ಆಸ್ಪತ್ರೆಗೆ ತಲುಪಿದೆವು,ಅಲ್ಲಿ ಪರಿಚಯದ ಡಾ,ಕರುಣಾಕರ್ ಸರ್ ಕೂಡಾ ಇದ್ದರು

Share News

About BigTv News

Check Also

ಅನ್ಯಕೋಮಿನ ಪಾಗಲ್ ಪ್ರೇಮಿಯಿಂದ ಟಾರ್ಚರ್ – ವಿದ್ಯಾರ್ಥಿನಿ ಸೂಸೈಡ್!

ಹಾಸನ: ಪ್ರೀತಿಸುವಂತೆ ಒತ್ತಾಯಿಸಿ ಕಿರುಕುಳ ನೀಡಿದ್ದಲ್ಲದೆ, ಖಾಸಗಿ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ಬೆದರಿಕೆ ಹಾಕಿದ ಆರೋಪದಿಂದ ಮನನೊಂದ 23 …

Leave a Reply

Your email address will not be published. Required fields are marked *