ಲೇಔಟ್ ನಲ್ಲಿ ಮನೆಗಳು ಇಲ್ಲದ ಕಾರಣ ಬಹುತೇಕ ನಿರ್ಜನವಾಗಿತ್ತು. ಯಾರೋ ಈ ಸಮಯದಲ್ಲಿ ಮಗುವನ್ನು ತಂದು ಇಟ್ಟು ಹೋಗಿರಬೇಕೆಂದು ಶಂಕಿಸಲಾಗಿದೆ. ರಾತ್ರಿ ಸುಮಾರು ಎಂಟು ಗಂಟೆಯ ವೇಳೆಗೆ ಮಗು ಅಳುತ್ತಿರುವ ಶಬ್ಧವು ದಾರಿಯಲ್ಲಿ ಹೋಗುತ್ತಿದ್ದ ಯುವಕರಿಗೆ ಕೇಳಿಸಿತ್ತು. ಕೂಡಲೇ ಅವರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದಾಗ ಮಗು ಪತ್ತೆಯಾಗಿದೆ. ಸದ್ಯ ವಾರದ ಹಿಂದೆ ಜನಿಸಿದ ಗಂಡು ಮಗುವನ್ನು ಯಾರೋ ಬಿಟ್ಟು ಹೋಗಿರಬಹುದು ಎಂದು ತಿಳಿದುಬಂದಿದೆ.ಯುವಕರು ಪೊಲೀಸರಿಗೆ ಮಾಹಿತಿ ನೀಡಿದ ಬಳಿಕ , ಮಗುವನ್ನು ಆಸ್ಪತ್ರೆಗೆ ದಾಖಲಿಸಿ ಸೂಕ್ತ ಚಿಕಿತ್ಸೆ ನೀಡಿ ರಕ್ಷಣೆ ಮಾಡಲಾಗಿದೆ. ಮಗುವಿಗೆ ಯಾವುದೇ ಪ್ರಾಣಾಪಾಯವಿಲ್ಲ ಎಂದು ತಿಳಿದುಬಂದಿದ್ದು, ಮಗುವಿನ ತಂದೆ-ತಾಯಿ ಹುಡುಕಾಟದಲ್ಲಿ ಪೊಲೀಸರು ನಿರತರಾಗಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

