Breaking News

ಕಟ್ಟಡದ ಮೆಟ್ಟಿಲಿನಿಂದ ಬಿದ್ದು ಕಾರ್ಮಿಕ ಮೃತ್ಯು

ಕಾಮಗಾರಿ ನಡೆಯುತ್ತಿದ್ದ ಕಟ್ಟಡದ ಮೆಟ್ಟಿಲು ಇಳಿಯುತ್ತಿದ್ದ ಕಾರ್ಮಿಕರೊಬ್ಬರು ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಮೃತಪಟ್ಟ ಘಟನೆ ನ.7ರಂದು ಆಸೋಡು ಗ್ರಾಮದ ಹೂವಿನಕೆರೆ ಮಠ ಎಂಬಲ್ಲಿ ನಡೆದಿದೆ.ಮೃತರನ್ನು ಜಾರ್ಖಂಡ್ ಮೂಲದ ಜಯಂತ(19) ಎಂದು ಗುರುತಿಸಲಾಗಿದೆ.ಇವರು ಕಟ್ಟಡದ ಪಿಲ್ಲರ್‌ನ ಕಾಂಕ್ರೀಟ್ ಕಾಮಗಾರಿಯ ಕೆಲಸ ಮಾಡುತ್ತಿದ್ದು ಕಟ್ಟಡದ ಕಾಂಕ್ರಿಟ್ ಕೆಲಸ ನಿರ್ವಹಿಸಿದ ಕಾರಣ ಮೆಟ್ಟಿಲಿನಲ್ಲಿ ನೀರು ಬಿದ್ದಿತ್ತೆನ್ನಲಾಗಿದೆ. ಇವರು ಊಟಕ್ಕಾಗಿ ಕಟ್ಟಡದ ಮೇಲಿನಿಂದ ಮೆಟ್ಟಿಲಿನಲ್ಲಿ ಇಳಿಯುವಾಗ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದರೆನ್ನಲಾಗಿದೆ. ಇದರಿಂದ ಗಂಭೀರವಾಗಿ ಗಾಯಗೊಂಡ ಅವರು, ಚಿಕಿತ್ಸೆ ಫಲಕಾರಿಯಾಗದೆ ರಾತ್ರಿ ವೇಳೆ ಮಣಿಪಾಲ ಆಸ್ಪತ್ರೆಯಲ್ಲಿ ಮೃತಪಟ್ಟರೆಂದು ತಿಳಿದುಬಂದಿದೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share News

About BigTv News

Check Also

2 ಲಕ್ಷ ರೂ. ಲಂಚ ಸ್ವೀಕರಿಸುತ್ತಿದ್ದ RFO ಲೋಕಾಯುಕ್ತ ಬಲೆಗೆ

ತುಮಕೂರು: ಗುಬ್ಬಿ ವಲಯ ಅರಣ್ಯಾಧಿಕಾರಿ (RFO) ಕೆ.ಎಸ್. ಸತೀಶ್ ಚಂದ್ರ ಅವರು ₹2 ಲಕ್ಷ ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ …

Leave a Reply

Your email address will not be published. Required fields are marked *