Breaking News

ದರೋಡೆಗೆ ಬಂದ ಕಳ್ಳ ಕಾಲಿ ಕೈಯಲ್ಲಿ ಹಿಂತಿರುಗಿದ; ಸಿಸಿಟಿವಿಯಲ್ಲಿ ಸೆರೆಯಾದ ಭಾವನಾತ್ಮಕ ವಿಡಿಯೋ

ದರೋಡೆ ಮಾಡಲು ಅಂಗಡಿಗೆ ನುಗ್ಗಿದ ಕಳ್ಳನೊಬ್ಬ ಕಾಲಿ ಕೈಯ್ಯಲ್ಲಿ ವಾಪಾಸ್ಸಾಗಿದ ಘಟನೆಯೊಂದು ಪಾಕಿಸ್ಥಾನದಲ್ಲಿ ನಡೆದಿದೆ. ಈ ಘಟನೆಯ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ವೈರಲ್‌ ಆಗುತ್ತಿದೆ.ವಿಡಿಯೋದಲ್ಲಿ ಅಂಗಡಿಯ ಮಾಲಿಕ ಹಾಗು ಆತನ ಪುಟ್ಟ ಮಗಳು ಕೌಂಟರ್‌ನಲ್ಲಿ ಕುಳಿತಿರುವುದನ್ನು ಕಾಣಬಹುದು.ಅದೇ ಸಮಯಕ್ಕೆ ಹೊರಗಿನಿಂದ ಬಂದ ವ್ಯಕ್ತಿಯೊಬ್ಬ ಪಿಸ್ತೂಲನ್ನು ತೋರಿಸಿ, ಅಂಗಡಿ ಮಾಲಿಕನಿಂದ ದೋಚಲು ಶುರು ಮಾಡುತ್ತಾನೆ. ಅಂಗಡಿ ಮಾಲಿಕನಲ್ಲಿ ಮೊಬೈಲ್‌ ಹಾಗು ಹಣ ಕೊಡುವಂತೆ ಹೆದರಿಸಿ, ಆತನಿಗೆ ಹೊಡೆಯುತ್ತಾನೆ.ಆದರೆ ಅಲ್ಲೇ ಕುಳಿತಿದ್ದ ಪುಟ್ಟ ಬಾಲಕಿಯು, ಆಪತ್ತಿನ ಅರಿವು ಇಲ್ಲದೆ ತನ್ನ ಕೈಯಲ್ಲಿದ್ದ ಲಾಲಿಪಾಪ್‌ನ್ನು ಕಳ್ಳನಿಗೆ ನೀಡಲು ಮುಂದೆ ಬರುತ್ತಾಳೆ. ಮಗುವಿನ ಈ ಕಾರ್ಯಕ್ಕೆ ಮನಸೋತ ಕಳ್ಳನು ತಾನು ತೆಗೆದುಕೊಂಡ ಹಣ ಹಾಗು ಮೊಬೈಲನ್ನು ಮರಳಿ ಅಂಗಡಿ ಮಾಲಿಕನಿಗೆ ನೀಡುತ್ತಾನೆ. ನಂತರ ಆ ಬಾಲಿಕಿಯ ಹಣೆಗೆ ಮುತ್ತಿಕ್ಕಿ ಅಂಗಡಿಯಿಂದ ಹೊರಹೋಗುತ್ತಾನೆ. ಆ ಪುಟ್ಟ ಮಗುವಿನ ಮುಗ್ಧತೆಗೆ ಕಳ್ಳನು ಮನಸೋತಿರುವುದು ವಿಡಿಯೋದಲ್ಲಿ ಕಂಡುಬಂದಿದೆ.

Share News

About BigTv News

Check Also

ಸಿಲಿಂಡರ್ ಸ್ಫೋಟಗೊಂಡು 20ಕ್ಕೂ ಹೆಚ್ಚು ಕಾರ್ಮಿಕರ ಶೆಡ್‌ಗಳು ಭಸ್ಮ!

ಕಲಬುರಗಿ ಜಿಲ್ಲೆಯ ಹೊನ್ನಕಿರಣಗಿ ಗ್ರಾಮದ ವ್ಯಾಪ್ತಿಯಲ್ಲಿ ನಿರ್ಮಾಣ ಹಂತದಲ್ಲಿರುವ ಗುಲ್ಬರ್ಗಾ ಸಿಮೆಂಟ್ ಕಾರ್ಖಾನೆಯಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಭಾರೀ ಅಗ್ನಿ …

Leave a Reply

Your email address will not be published. Required fields are marked *