Breaking News

ಉಚ್ಚಿಲ : ಎಕ್ಸ್ ಪ್ರೆಸ್ ಬಸ್ ನಿಂದ ಬಿದ್ದು ವ್ಯಕ್ತಿ ಸಾವು.

ಮಂಗಳೂರಿನಿಂದ ಉಡುಪಿಗೆ ಬರುತ್ತಿದ್ದ ಖಾಸಗಿ ಎಕ್ಸ್‌ಪ್ರೆಸ್‌ ಬಸ್‌ನಿಂದ ಕೆಳಗೆ ಬಿದ್ದು ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಉಚ್ಚಿಲದಲ್ಲಿ ಶುಕ್ರವಾರ ರಾತ್ರಿ ಸಂಭವಿಸಿದೆ.ಮಂಗಳೂರಿನ ಹೊಟೇಲೊಂದರ ನೌಕರ ಕಾಪು ಪಡುಗ್ರಾಮದ ನಿವಾಸಿ ಸಕೇಂದ್ರ ಪೂಜಾರಿ (52) ಮೃತಪಟ್ಟವರು.ಬಸ್‌ ಉಚ್ಚಿಲಕ್ಕೆ ತಲುಪಿದಾಗ ಇಳಿಯಲು ಸಿದ್ಧರಾಗಿ ಮುಂಭಾಗದ ಬಾಗಿಲ ಬಳಿ ನಿಂತಿದ್ದರು. ಅಷ್ಟರಲ್ಲಿ ಚಾಲಕನು ಎದುರಿನಿಂದ ಹೋಗುತ್ತಿದ್ದ ಮತ್ತೂಂದು ವಾಹನವನ್ನು ಹಿಂದಿಕ್ಕಿಲು ಬಸ್ಸನ್ನು ಒಮ್ಮೆಲೇ ನಿರ್ಲಕ್ಷ್ಯದಿಂದ ಬಲಕ್ಕೆ ತಿರುಗಿಸಿದ ಪರಿಣಾಮ ಬಾಗಿಲ ಮೂಲಕ ಅವರು ಕೆಳಕ್ಕೆ ಎಸೆಯಲ್ಪಟ್ಟರು. ರಸ್ತೆ ವಿಭಾಜಕಕ್ಕೆ ತಲೆ ತಾಗಿ ಗಂಭೀರವಾಗಿ ಗಾಯಗೊಂಡರು

Share News

About BigTv News

Check Also

ಆನ್‌ಲೈನ್ ಆಯಪ್‌ನಲ್ಲಿ ಸಾಲ ಪಡೆದ ಮಹಿಳೆಗೆ ಫೋಟೋ ಮಾರ್ಫಿಂಗ್ ಬೆದರಿಕೆ – ₹2.90 ಲಕ್ಷ ವಂಚನೆ!

ಮಂಗಳೂರು: ಆನ್‌ಲೈನ್ ಆಯಪ್ ಮೂಲಕ ಸಾಲ ಪಡೆದ ಮಹಿಳೆಯೊಬ್ಬರಿಗೆ ಫೋಟೋ ಮಾರ್ಫ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಬೆದರಿಸಿ ₹2.90 …

Leave a Reply

Your email address will not be published. Required fields are marked *