Breaking News

ಪಿಎಸ್‌ಐ ನೇಮಕಾತಿ ಪ್ರಕರಣ : ಬಂಧಿತ ಆರೋಪಿಯ ಅಣ್ಣ ಆತ್ಮಹತ್ಯೆ


ಹಾಸನ: ಪಿಎಸ್‌ಐ ನೇಮಕಾತಿ ಹಗರಣದ ಪ್ರಕರಣ ದಿನಕ್ಕೊಂದು ಸ್ವರೂಪ ಪಡೆದುಕೊಳ್ತಿದೆ. ಇದೀಗ ಆರೋಪಿಯ ಅಣ್ಣನೊಬ್ಬ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ಹಾಸನದ ಹೊಳೆನರಸೀಪುರ ತಾಲ್ಲೂಕಿನ ಗುಂಜೇವು ಗ್ರಾಮದ ಮನುಕುಮಾರ್ ಎಂಬಾತ ಪಿಎಸ್‌ಐ ಪರೀಕ್ಷೆ ಬರೆದು 50 ನೇ ರ್ಯಾಂಕ್ ಪಡೆದು ಆಯ್ಕೆಯಾಗಿದ್ದ, ಅಕ್ರಮ ಬೆಳಕಿಗೆ ಬರುತ್ತಿದ್ದಂತೆ ಪಿಎಸ್‌ಐ ಅಭ್ಯರ್ಥಿಗಳನ್ನು ವಿಚಾರಣೆ ನಡೆಸಿದ್ದ ಸಿಐಡಿ ಪೊಲೀಸರು ಕೆಲವರನ್ನು ಬಂಧನ ಮಾಡಿದ್ದರು.

ಈ ಹಂತದಲ್ಲಿ ಸಿಐಡಿ ಅಧಿಕಾರಿಗಳು ಅಭ್ಯರ್ಥಿ ಮನುಕುಮಾರ್‌ನನ್ನ ಬಂಧಿಸಿದ್ದರು. ಪ್ರಕರಣದಲ್ಲಿ ತಮ್ಮನ ಬಂಧನವಾಗುತ್ತಿದ್ದಂತೆ ಅಣ್ಣ ವಾಸು ತುಂಬಾ ನೊಂದುಕೊಂಡಿದ್ದ ಎನ್ನಲಾಗಿದೆ. ತಮ್ಮನನ್ನ ಪಿಎಸ್‌ಐ ಮಾಡಲು ವಾಸು ಸಾಲ ಮಾಡಿ 10 ಲಕ್ಷ ಹಣ ಕೊಟ್ಟಿರುವ ಶಂಕೆ ವ್ಯಕ್ತವಾಗಿದೆ. ಇದೇ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿರಬಹುದು ಎನ್ನಲಾಗುತ್ತಿದೆ.

ಹೊಳೆನರಸೀಪುರ ಪಟ್ಟಣದಲ್ಲೇ ವಾಸವಾಗಿದ್ದುಕೊಂಡು ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಡಿ-ಗ್ರೂಪ್ ಕೆಲಸ ನಿರ್ವಹಿಸುತ್ತಿದ್ದ ವಾಸು ಮಾನಸಿಕವಾಗಿ ಖಿನ್ನತೆಗೆ ಒಳಗಾಗಿದ್ದರು ಮತ್ತು ಹಲವು ದಿಂದ ಕೆಲಸಕ್ಕೆ ಹೋಗುತ್ತಿರಲಿಲ್ಲ ಎಂದು ಮೃತರ ಪತ್ನಿ ತಿಳಿಸಿದ್ದಾರೆ.

ಮತ್ತೊಂದು ಕಡೆ ವಾಸುನ ಅಂತಿಮ ದರ್ಶನಕ್ಕೆ ಮನುಕುಮಾರ್‌ ನನ್ನ ಕರೆದೊಯ್ಯಲು ಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ. ಸದ್ಯ ಮನುಕುಮಾರ್‌ ಸಿಐಡಿ ಕಸ್ಟಡಿಯಲ್ಲಿದ್ದಾನೆ. ಪಿಎಸ್‌ಐ ಹಗರಣದ ನಂತರ ವಾಸು ಅವರು ಆತ್ಮಹತ್ಯೆಗೆ ಶರಣಾಗಿದ್ದು ಕುಟುಂಬಸ್ಥರು ಹಗರಣಕ್ಕೂ ಅವರ ಸಾವಿಗೂ ಸಂಬಂಧ ಇಲ್ಲ ಎಂದು ಹೇಳುತ್ತಿದ್ದಾರೆ.

Share News

About BigTv News

Check Also

TCS ನಾಸಿಕ್ ಪ್ರಕರಣ: ಆರೋಪಿ ನಿದಾ ಖಾನ್ ಪತಿ ಬಂಧನ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಶಾಖೆಯ ಸುತ್ತಲಿನ ವಿವಾದ ನಾಟಕೀಯ ತಿರುವು ಪಡೆದುಕೊಂಡಿದ್ದು, ಕಂಪನಿಗೆ ಸಂಬಂಧಿಸಿದ ಒಂಬತ್ತು …

Leave a Reply

Your email address will not be published. Required fields are marked *