ಇಂಡಿಯನ್ ಸ್ಟಾಕ್ ರಿಲಯನ್ಸ್ ಸೆಕ್ಯೂರಿಟೀಸ್ ಹೆಸರಲ್ಲಿ ನಕಲಿ ಖಾತೆ ಸೃಷ್ಟಿಸಿದ ವಂಚಕರು ಶೃಂಗೇರಿ ಮೂಲದ 72 ವರ್ಷದ ಶಂಕರ್ ನಟರಾಜನ್ ಎಂಬುವವರಿಗೆ ಬರೋಬ್ಬರಿ 3 ಕೋಟಿ.27 ಲಕ್ಷ ರೂಪಾಯಿ ವಂಚಿಸಿದ್ದಾರೆ.ಇಂಡಿಯನ್ ಸ್ಟಾಕ್ ರಿಲಯನ್ಸ್ ಸೆಕ್ಯೂರಿಟಿಸ್ ಹೆಸರಲ್ಲಿ ಶಂಕರ್ ನಟರಾಜನ್ ಅವರಿಗೆ ವಾಟ್ಸಪ್ ಮೆಸೆಜ್ ಬಂದಿತ್ತು. ನೀವು ಹೂಡಿಕೆ ಮಾಡ್ದ ಹಣ ಲಾಭ ಬಂದಿದೆ. ನಿಮ್ಮ ಖಾತೆಯಲ್ಲಿ 9 ಕೋಟಿ ಹಣವಿದ್ದು ಅದನ್ನು ಪಡೆಯಲು ನೀವು 1 ಕೋಟಿ 9 ಲಕ್ಷ ರೂಪಾಯಿ ಕಮಿಷನ್ ಹಾಕಬೇಕು ಎಂದು ವಂಚಕರು ಬೇದಿಕೆ ಇಟ್ಟಿದ್ದರು. ಇದನ್ನು ನಂಬಿದ ಶಂಕರ್ ನಟರಾಜನ್ ಅವರಿಂದ ವಂಚಕರು ಹಂತ ಹಂತವಾಗಿ 3 ಕೋಟಿ 27 ಲಕ್ಷ ಹಣ ದೋಚಿದ್ದಾರೆ. ಲಾಭಾಂಶದ ಹಣ ಪಡೆಯಲು ಸಾದ್ಯವಾಗದಿದ್ದಾಗ ಶಂಕರ್ ನಟರಾಜನ್ ಮಹಾರಾಷ್ಟ್ರದ ಇಂಡಿಯನ್ ಸ್ಟಾಕ್ ರಿಲಯನ್ಸ್ ಸೆಕ್ಯೂರಿಟೀಸ್ ಕೇಂದ್ರ ಕಚೇರಿಗೆ ಭೇಟಿ ನೀಡಿದ್ದಾರೆ. ಈ ವೇಳೆ ನಕಲಿ ಖಾತೆ ತೆರೆದು ವಂಚಕರು ತನ್ನನ್ನು ವಂಚಿಸಿರುವುದು ಬೆಳಕಿಗೆ ಬಂದಿದೆ.ವಂಚನೆಗೊಳಗಾದ ಶಂಕರ್ ನಟರಾಜನ್ ಚಿಕ್ಕಮಗಳೂರು ಠಾಣೆಯಲ್ಲಿ ದೂರು ನೀಡಿದ್ದು, ಎಫ್ ಐ ಆರ್ ದಾಖಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

