ಮಂಗಳೂರು: ನಗರದ ಸುರತ್ಕಲ್ ಕಾನ ನಿವಾಸಿ ಶೇಖಬ್ಬ (61) ಎಂಬವರು ನ.27ರಂದು ಮನೆಯಿಂದ ಹೊರಗೆ ಹೋದವರು ನಾಪತ್ತೆಯಾಗಿದ್ದಾರೆ.ಬೆಳಗ್ಗೆ 6.50ಕ್ಕೆ ಎಂದಿನಂತೆ ಮನೆಯ ಪಕ್ಕದಲ್ಲಿದ್ದ ಅವರದ್ದೇ ಮಾಲಕತ್ವದ ಜನರಲ್ ಸ್ಟೋರ್ ಅನ್ನು ತೆರೆಯಲು ಮನೆಯಿಂದ ಹೋಗಿದ್ದು, ಅಂಗಡಿ ತೆರೆಯದೆ, ಮನೆಗೂ ವಾಪಸ್ ಬಾರದೆ ಕಾಣೆಯಾಗಿದ್ದಾರೆ ಎಂದು ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಸುಮಾರು 5.9 ಅಡಿ ಎತ್ತರ, ಬಿಳಿ ಮೈಬಣ್ಣ, ದುಂಡು ಮುಖ, ತೆಳು ಮೀಸೆ, ಬೊಕ್ಕತಲೆ ಸಾಧಾರಣ ಶರೀರ ಹೊಂದಿದ್ದಾರೆ. ಕನ್ನಡ, ತುಳು, ಬ್ಯಾರಿ ಭಾಷೆ ಬಲ್ಲವರಾಗಿದ್ದಾರೆ. ಶೇಖಬ್ಬ ಅವರ ಬಗ್ಗೆ ಮಾಹಿತಿ ಇದ್ದಲ್ಲಿ ಸುರತ್ಕಲ್ ಪೊಲೀಸ್ ಠಾಣೆಯನ್ನು ಸಂಪರ್ಕಿಸಬಹುದು.
bigtvnews | Hubli Dharwad News | Kannada News | Karnataka News Hubli News | News In Hubli | Local news

