Breaking News

ಕರ್ತವ್ಯ ಲೋಪದ ಆರೋಪ: ನಾಲ್ವರು ಪೊಲೀಸರ ಅಮಾನತು

ಬೆಂಗಳೂರು: ಕರ್ತವ್ಯ ಲೋಪದ ಆರೋಪದ ಮೇರೆಗೆ ನಾಲ್ವರು ಪೊಲೀಸರನ್ನು ಉತ್ತರ ವಿಭಾಗದ ಡಿಸಿಪಿ ನೇಮಗೌಡ ಅವರು ಅಮಾನತು ಮಾಡಿ ಆದೇಶಿಸಿದ್ದಾರೆ. ನಂದಿನಿಲೇಔಟ್‌ ಠಾಣೆಯ ಎಎಸ್‌ಐ ಶ್ರೀನಿವಾಸ ಮೂರ್ತಿ, ಸುಬ್ರಹ್ಮಣ್ಯ ನಗರ ಠಾಣೆ ಎಎಸ್‌ಐ ಜಯರಾಮೇಗೌಡ ಹಾಗೂ ಕಾನ್‌ಸ್ಟೆಬಲ್‌ ಧರ್ಮ ಹಾಗೂ ಸಂಜಯನಗರ ಠಾಣೆಯ ಕಾನ್‌ ಸ್ಟೆಬಲ್‌ ನಜೀರ್‌ಅಮಾನತುಗೊಂಡ ಸಿಬ್ಬಂದಿ.ದೂರು ನೀಡಲು ಬಂದ ಸಂತ್ರಸ್ತನಿಂದ ದೂರು ಪಡೆದುಕೊಳ್ಳದೇ ನಿರ್ಲಕ್ಷ್ಯ ತೋರಿದ ಆರೋಪದಡಿ ನಂದಿನಿ ಲೇಔಟ್‌ ಠಾಣೆ ಎಎಸ್‌ಐ ಶ್ರೀನಿವಾಸಮೂರ್ತಿ ಅಮಾನತುಗೊಂಡಿದ್ದಾರೆ ಎನ್ನಲಾಗಿದೆ. ಕೋರ್ಟ್‌ನಿಂದ ಸಮನ್ಸ್‌ ಬಂದರೂ ಸಮಯಕ್ಕೆ ಸರಿಯಾಗಿ ಸಾಕ್ಷಿ ಹಾಜರುಪಡಿಸದೇ ನಿರ್ಲಕ್ಷಿಸಿದ್ದ ಆರೋಪದಡಿ ಸುಬ್ರಹ್ಮಣ್ಯನಗರ ಠಾಣೆ ಎಎಸ್‌ಐ ಜಯರಾಮೇಗೌಡ ಹಾಗೂ ಹೆಡ್‌ ಕಾನ್‌ಸ್ಟೇಬಲ್‌ ಧರ್ಮ ಸಸ್ಪೆಂಡ್‌ ಆಗಿದ್ದಾರೆ ಎಂದು ತಿಳಿದು ಬಂದಿದೆ. ಸಿಎಂ ಕಾವೇರಿ ನಿವಾಸದ ಬಂದೋಬಸ್ತ್ ಗೆ ಗೈರಾಗಿದ್ದ ಹಿನ್ನೆಲೆಯಲ್ಲಿ ಸಂಜಯನಗರ ಠಾಣೆ ಪೊಲೀಸ್‌ ಕಾನ್‌ ಸ್ಟೇಬಲ್‌ ನಜೀರ್‌ನನ್ನು ಅಮಾನತುಗೊಳಿಸಲಾಗಿದೆ ಎಂದು ತಿಳಿದುಬಂದಿದೆ.

Share News

About BigTv News

Check Also

ಕೋಲಾರದಲ್ಲಿ ರೈತರು-ಅರಣ್ಯ ಇಲಾಖೆ ಮಧ್ಯೆ ಸಂಘರ್ಷ: ಸಿಬ್ಬಂದಿ ಮೇಲೆ ಮಚ್ಚಿನಿಂದ ಅಟ್ಯಾಕ್‌

ಕೋಲಾರ: ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಮಲ್ಲಂಪಲ್ಲಿ ಗ್ರಾಮದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಮೇಲೆ ಮಚ್ಚಿನಿಂದ ಹಲ್ಲೆ ನಡೆದಿದ್ದು, ಮೂವರು ಗಂಭೀರವಾಗಿ …

Leave a Reply

Your email address will not be published. Required fields are marked *