Breaking News

ಥಾಯ್ಲೆಂಡ್‌ನಿಂದ ರಾಜ್ಯಕ್ಕೆ ಹೆಚ್ಚು ಹೈಡ್ರೋ ಗಾಂಜಾ!

ಎರಡು ತಿಂಗಳಲ್ಲೇ ದೇವನಹಳ್ಳಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 26 ಮಂದಿ ‘ಬ್ಯಾಂಕಾಕ್‌ ‘ಪ್ರಯಾಣಿಕರನ್ನು ಸೆರೆ ಹಿಡಿದು 112.2 ಕೋಟಿ ರು. ಮೌಲ್ಯದ 1.60 ಕ್ವಿಂಟಲ್‌ ಹೈಡೋ ಗಾಂಜಾವನ್ನು ಕಸ್ಟಮ್ಸ್ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಅದೇ ರೀತಿ 8 ತಿಂಗಳ ಅವಧಿಯಲ್ಲಿ ಚಾಮರಾಜಪೇಟೆಯಲ್ಲಿರುವ ವಿದೇಶಿ ಅಂಚೆ ಕಚೇರಿಯಲ್ಲಿ 20 ಕೋಟಿ ರು. ಮೌಲ್ಯದ ಹೈಡ್ರೋ ಗಾಂಜಾವನ್ನು ಸಿಸಿಬಿ ವಶಪಡಿಸಿಕೊಂಡಿದೆ. ಇನ್ನು ಇತ್ತೀಚೆಗೆ ಬ್ಯಾಂಕಾಕ್‌ನಿಂದ ಅಕ್ರಮವಾಗಿ 18.65 ಕೋಟಿ ರು. ಮೌಲ್ಯದ ಹೈಡ್ರೋ ಗಾಂಜಾ ಸಾಗಿಸಿದ್ದ ದಂಪತಿ ಮಹಾಲಕ್ಷ್ಮೀ ಲೇಔಟ್ ಠಾಣೆ ಪೊಲೀಸರು ಬಲೆಗೆ ಕೆಡವಿದ್ದಾರೆ.ರಾಜ್ಯಕ್ಕೆ ಮೊದಲೆಲ್ಲ ಆಫ್ರಿಕಾ ದೇಶಗಳಿಂದ ಎಂಡಿಎಂಎ ಹಾಗೂ ಕೊಕೇನ್ ಸೇರಿ ಸಿಂಥೆಟಿಕ್ ಡ್ರಗ್ಸ್ ಪೂರೈಕೆಯಾದರೆ, ಪಾಕಿಸ್ತಾನ, ಮ್ಯಾನ್ಮಾರ್, ಬಾಂಗ್ಲಾದೇಶ ಹಾಗೂ ಅಪ್ಘಾನಿಸ್ತಾನ ದೇಶಗಳಿಂದ ನೈಸರ್ಗಿಕವಾಗಿ ಅಫೀಮು, ಹೈಡ್ರೋ ಗಾಂಜಾ ಹಾಗೂ ಚರಸ್ ಹರಿದು ಬರುತ್ತಿತ್ತು. ಆದರೀಗ ಥಾಯ್ಲೆಂಡ್‌ ಅತಿ ಹೆಚ್ಚು ಹೈಡ್ರೋ ಗಾಂಜಾ ಸರಬರಾಜು ಮಾಡುವ ದೇಶವಾಗುತ್ತಿದೆ.

Share News

About BigTv News

Check Also

ಮದುವೆಯಾಗಿ ಮಕ್ಕಳಿದ್ರೂ ಅಕ್ರಮ ಸಂಬಂಧ: ರೈಲಿಗೆ ತಲೆಕೊಟ್ಟು ವಿವಾಹಿತೆಯೊಂದಿಗೆ ಯುವಕ ಆತ್ಮಹತ್ಯೆ

ಮಂಡ್ಯದ ವಿಸಿ ಫಾರಂ ರಸ್ತೆಯ ರೈಲ್ವೆ ಹಳಿಯಲ್ಲಿ ರೈಲಿಗೆ ತಲೆಕೊಟ್ಟು ವಿವಾಹಿತೆ ಸಹನಾ (25) ಮತ್ತು ರಾಹುಲ್ (23) ಆತ್ಮಹತ್ಯೆಗೆ …

Leave a Reply

Your email address will not be published. Required fields are marked *