Breaking News

ಬಾಲಕನ ಕೆನ್ನೆಗೆ ಬಾರಿಸಿದ ಆರೋಪ: ಬೆಂಗಳೂರಿನ ಖಾಸಗಿ ಶಾಲೆ ಪಿಟಿ ಟೀಚರ್ ಮೇಲೆ ಎಫ್‌ಐಆರ್ ದಾಖಲು!

ಬೆಂಗಳೂರು: ನಗರದ ಖಾಸಗಿ ಶಾಲೆಯ ಪಿಟಿ ಶಿಕ್ಷಕ ರಾಜೇಶ್ ವಿರುದ್ಧ ಏಳನೇ ತರಗತಿಯ ಬಾಲಕನಿಗೆ ಹಲ್ಲೆ ನಡೆಸಿದ ಪ್ರಕರಣದಲ್ಲಿ ಹುಳಿಮಾವು ಪೊಲೀಸರು ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಶಿಕ್ಷಕರನ್ನು ಬಂಧಿಸಿದ್ದಾರೆ.ಮಾಹಿತಿ ಪ್ರಕಾರ, ಸ್ಟಾಪ್ ರೂಮ್‌ನಲ್ಲಿ ಇತರ ಶಿಕ್ಷಕರ ಸಮ್ಮುಖದಲ್ಲೇ ಪಿಟಿ ಟೀಚರ್ ರಾಜೇಶ್ ಬಾಲಕನ ಕೆನ್ನೆಗೆ ಕೈಯಿಂದ ಬಾರಿಸಿದ ಆರೋಪ ಕೇಳಿ ಬಂದಿದೆ.ಹೊಡೆತದ ಪರಿಣಾಮ ಬಾಲಕನ ಕೆನ್ನೆ ಉದಿಕೊಂಡಿದ್ದು, ನೋವಿನಿಂದ ಬಳಲುತ್ತಿದ್ದಾನೆ ಎಂದು ಕುಟುಂಬದವರು. ಮಗ ಶಾಲೆಯಿಂದ ಮನೆಗೆ ತಡವಾಗಿ ಬಂದ ಕಾರಣ ತಂದೆ ಶಾಲೆಗೆ ತೆರಳಿದಾಗ ಹಲ್ಲೆಯ ಘಟನೆ ಬೆಳಕಿಗೆ ಬಂದಿದೆ. ಬಳಿಕ ಬಾಲಕನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ನೀಡಲಾಯಿತು.ನಂತರ ಬಾಲಕನ ತಂದೆ ಹುಳಿಮಾವು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ ನಂತರ, ಪೊಲೀಸ್ ಶಿಕ್ಷಕ ರಾಜೇಶ್ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ.

Share News

About BigTv News

Check Also

ಪತ್ನಿಯನ್ನು ಕತ್ತು ಹಿಸುಕಿ ಹತ್ಯೆಗೈದು ಇಡೀ ರಾತ್ರಿ ಶವದ ಪಕ್ಕದಲ್ಲೇ ಮಲಗಿದ್ದ ಪಾಪಿ ಪತಿ.!

ದೆಹಲಿ: ಮದ್ಯ ಸೇವಿಸುವುದನ್ನು ಪತ್ನಿ ವಿರೋಧಿಸಿದ್ದಕ್ಕೆ ಕೋಪಗೊಂಡ ಪತಿಯೊಬ್ಬ 32 ವರ್ಷದ ಗೀತಾ ಭಾಟಿ ಅವರನ್ನು ಕತ್ತು ಹಿಸುಕಿ ಹತ್ಯೆಗೈದ …

Leave a Reply

Your email address will not be published. Required fields are marked *