Breaking News

ಪತ್ನಿಯನ್ನು ಕತ್ತು ಹಿಸುಕಿ ಹತ್ಯೆಗೈದು ಇಡೀ ರಾತ್ರಿ ಶವದ ಪಕ್ಕದಲ್ಲೇ ಮಲಗಿದ್ದ ಪಾಪಿ ಪತಿ.!

ದೆಹಲಿ: ಮದ್ಯ ಸೇವಿಸುವುದನ್ನು ಪತ್ನಿ ವಿರೋಧಿಸಿದ್ದಕ್ಕೆ ಕೋಪಗೊಂಡ ಪತಿಯೊಬ್ಬ 32 ವರ್ಷದ ಗೀತಾ ಭಾಟಿ ಅವರನ್ನು ಕತ್ತು ಹಿಸುಕಿ ಹತ್ಯೆಗೈದ ಘಟನೆ ಆನಂದ ಪರ್ವತ್ ಪ್ರದೇಶದಲ್ಲಿ ನಡೆದಿದೆ. ಆರೋಪಿ ಚಂದ್ರಪಾಲ್ ಭಾಟಿ, ಹತ್ಯೆಯ ಬಳಿಕ ಪತ್ನಿಯ ಶವದ ಪಕ್ಕದಲ್ಲೇ ಇಡೀ ರಾತ್ರಿ ಮಲಗಿದ್ದ ಎನ್ನಲಾಗಿದೆ. 11 ವರ್ಷಗಳ ಹಿಂದೆ ಮದುವೆಯಾಗಿದ್ದ ದಂಪತಿಗೆ ಇಬ್ಬರು ಪುತ್ರಿಯರಿದ್ದಾರೆ. ಮದ್ಯ ಸೇವಿಸಿ ಪತ್ನಿಗೆ ಹಲ್ಲೆ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಗೀತಾ ಮಕ್ಕಳೊಂದಿಗೆ ತಾಯಿ ಮನೆಯಲ್ಲಿ ವಾಸವಾಗಿದ್ದರು. 10 ದಿನಗಳ ಹಿಂದೆ ಕ್ಷಮೆ ಕೇಳಿ ಮತ್ತೆ ಅವರೊಂದಿಗೆ ವಾಸಿಸಲು ಆರಂಭಿಸಿದ್ದ ಚಂದ್ರಪಾಲ್, ಘಟನೆ ನಡೆದ ರಾತ್ರಿ ಮದ್ಯ ಸೇವಿಸಿ ಬಂದಿದ್ದಕ್ಕೆ ಗೀತಾ ವಿರೋಧಿಸಿದಾಗ ಜಗಳವಾಡಿ ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಮುಂಜಾನೆ ಮಗಳು ಘಟನೆ ಗಮನಿಸಿ ಅಜ್ಜಿಗೆ ಮಾಹಿತಿ ನೀಡಿದ್ದಾಳೆ. ಬಳಿಕ ಪೊಲೀಸರು ಸಿಸಿಟಿವಿ ಹಾಗೂ ಕರೆ ವಿವರಗಳ ಆಧಾರದಲ್ಲಿ ತನಿಖೆ ನಡೆಸಿ ಬುಲಂದ್‌ಶಹರ್‌ನಲ್ಲಿ ಚಂದ್ರಪಾಲ್‌ನನ್ನು ಬಂಧಿಸಿದ್ದಾರೆ.

Share News

About BigTv News

Check Also

ಗಣೇಶೋತ್ಸವ ಮೆರವಣಿಗೆ ವೇಳೆ ಭಟ್ಕಳದಲ್ಲಿ ಮಸೀದಿ, ಮದರಸಾ ಮೇಲೆ ಕಲ್ಲು ತೂರಾಟ ಆರೋಪ: ಬಿಗಿ ಬಂದೋಬಸ್ತ್

ಉತ್ತರಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಮಸೀದಿ ಹಾಗೂ ಮದರಸಾ ಮೇಲೆ ಕಲ್ಲು ತೂರಾಟ ನಡೆಸಿದ ಆರೋಪ …

Leave a Reply

Your email address will not be published. Required fields are marked *