Breaking News

ಟಿ.ನರಸೀಪುರ ಪ್ರಕರಣ: ತಾನೇ ಯೂಟ್ಯೂಬರ್​ಗಳನ್ನು ಕರೆಸಿಕೊಂಡು ವಿಡಿಯೋ ಮಾಡಿಸಿ ಅವರ ವಿರುದ್ಧವೇ ಕೇಸ್ ದಾಖಲಿಸಿದ ಇನ್ಸ್​ಪೆಕ್ಟರ್!

ಮೈಸೂರು, ಸೆ.17: ಟಿ.ನರಸೀಪುರ ಇನ್ಸ್‌ಪೆಕ್ಟರ್ ಧನಂಜಯ್ ಅವರ ವಿವಾದಿತ ಹೇಳಿಕೆಯ ವಿಡಿಯೋ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ವಿಡಿಯೋ ಚಿತ್ರೀಕರಿಸಿದ್ದ ಯೂಟ್ಯೂಬರ್ ಮಂಜು ವಿರುದ್ಧ ಇದೀಗ ಎಫ್‌ಐಆರ್ ದಾಖಲಾಗಿದೆ. ಆದರೆ, ತಮ್ಮನ್ನು ಠಾಣೆಗೆ ಕರೆಸಿ ಗಣಪತಿ ವಿಸರ್ಜನೆ ಸಂಬಂಧದ ಚರ್ಚೆಗಳನ್ನು ಚಿತ್ರೀಕರಿಸಲು ಸೂಚಿಸಿದ್ದೇ ಇನ್ಸ್‌ಪೆಕ್ಟರ್ ಧನಂಜಯ್ ಎಂದು ಮಂಜು ಆರೋಪಿಸಿದ್ದಾರೆ. ಕಾನ್ಸ್‌ಟೇಬಲ್ ಯಶ್ವಂತ್ ಮೂಲಕ ತಮ್ಮನ್ನು ಕರೆಸಲಾಗಿತ್ತು ಎಂದು ಅವರು ತಿಳಿಸಿದ್ದಾರೆ. ವಿಡಿಯೋ ಅಪ್ಲೋಡ್ ಮಾಡುವಾಗ ಇನ್ಸ್‌ಪೆಕ್ಟರ್ ಯಾವುದೇ ಆಕ್ಷೇಪ ವ್ಯಕ್ತಪಡಿಸಿರಲಿಲ್ಲ. ಇದೀಗ ಅದೇ ವಿಡಿಯೋದಿಂದ ಅಶಾಂತಿ ಸೃಷ್ಟಿಯಾಗಿದೆ ಎಂದು ದೂರು ನೀಡಿರುವುದು ತಪ್ಪನ್ನು ಮುಚ್ಚಿಹಾಕುವ ಪ್ರಯತ್ನ ಎಂದು ಮಂಜು ಆರೋಪಿಸಿದ್ದಾರೆ.

Share News

About BigTv News

Check Also

ಗಣೇಶೋತ್ಸವ ಮೆರವಣಿಗೆ ವೇಳೆ ಭಟ್ಕಳದಲ್ಲಿ ಮಸೀದಿ, ಮದರಸಾ ಮೇಲೆ ಕಲ್ಲು ತೂರಾಟ ಆರೋಪ: ಬಿಗಿ ಬಂದೋಬಸ್ತ್

ಉತ್ತರಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಮಸೀದಿ ಹಾಗೂ ಮದರಸಾ ಮೇಲೆ ಕಲ್ಲು ತೂರಾಟ ನಡೆಸಿದ ಆರೋಪ …

Leave a Reply

Your email address will not be published. Required fields are marked *