Breaking News

ರಸ್ತೆ ಗುಂಡಿ ತಪ್ಪಿಸಲು ಹೋಗಿ ಗಂಭೀರ ಗಾಯಗೊಂಡು ಜೀವನ್ಮರಣ ಹೋರಾಟ ನಡೆಸುತ್ತಿರುವ ಯುವಕ

ಬೈಕ್​​​ ಸವಾರರೊಬ್ಬರು ಅಪಘಾತವನ್ನು ತಪ್ಪಿಸಲು ಹೋಗಿ ಬಿದ್ದು ಗಂಭೀರ ಗಾಯ ಮಾಡಿಕೊಂಡಿದ್ದಾರೆ. ಬೆಂಗಳೂರಿನ ನೆಲಮಂಗಲದ ಸುಭಾಷ್ ನಗರದ ಬಜಾಜ್ ಶೋ ರೂಮ್ ಬಳಿ ಈ ಘಟನೆ ನಡೆದಿದೆ.ಮುಂದಿನಿಂದ ಹೋಗುತ್ತಿದ್ದ ಬೈಕ್ ಸವಾರ​​​ ಗುಂಡಿ ಇದೆ ಎಂದು ಏಕಾಏಕಿ ಬ್ರೇಕ್​​ ಹಾಕಿದ್ದಾನೆ. ಹಿಂದೆಯಿಂದ ವೇಗವಾಗಿ ಬರುತ್ತಿದ್ದ ತಬ್ರೇಜ್ ಎಂಬ ಬೈಕ್​ ಸವಾರ ಅಪಘಾತ ತಪ್ಪಿಸಲು ಹೋಗಿ ಬೈಕ್​​ಗೆ ಡಿಕ್ಕಿ ಹೊಡೆದಿದ್ದಾರೆ. ಇದರ ಪರಿಣಾಮ ತಬ್ರೇಜ್​​ಗೆ ಗಂಭೀರ ಗಾಯಗಳಾಗಿವೆ. ತಬ್ರೇಜ್ ಇಸ್ಲಾಂಪುರದ ನಿವಾಸಿ ಎಂದು ಹೇಳಲಾಗಿದೆ. ಇದೀಗ ಅವರಿಗೆ ನಿಮಾನ್ಸ್​ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಅಪಘಾತದ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದೀಗ ತಬ್ರೇಜ್ ಗಂಭೀರ ಗಾಯದಿಂದ ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ. ಸುಭಾಷ್ ನಗರದ ಬಜಾಜ್ ಶೋ ರೂಮ್ ಬಳಿ ಪೈಪ್ ಲೈನ್ ಮಾಡಲು ತೆಗೆದಿದ್ದ ಗುಂಡಿ ಸಂಪೂರ್ಣವಾಗಿ ಮುಚ್ಚದ ಪರಿಣಾಮ ಈ ಅಪಘಾತ ನಡೆದಿದೆ. ಇದೀಗ ಈ ಘಟನೆಯ ಬಗ್ಗೆ ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share News

About BigTv News

Check Also

ಆಟೋ ಗಲಾಟೆ: ದೇವಸ್ಥಾನಕ್ಕೆ ಬಂದಿದ್ದ ದಲಿತ ಕುಟುಂಬದ ಮೇಲೆ ಸವರ್ಣೀಯರಿಂದ ಹಲ್ಲೆ

ಯಾದಗಿರಿ ಜಿಲ್ಲೆಯ ವಡಗೇರ ತಾಲೂಕಿನ ಗುರುಸಣಗಿ ಗ್ರಾಮದ ಸಿದ್ದಲಿಂಗೇಶ್ವರ ದೇವಸ್ಥಾನಕ್ಕೆ ದರ್ಶನಕ್ಕೆ ಬಂದಿದ್ದ ದಲಿತ ಕುಟುಂಬದ ಮೇಲೆ ಕಲ್ಲು ಹಾಗೂ …

Leave a Reply

Your email address will not be published. Required fields are marked *